Movie Reviews
ಪಾಂಡೆ ಜತೆ ಖಡಕ್ ಬಾಲಿಸಿಂಗ್ – ದಬಾಂಗ್ ಚಿತ್ರ ವಿಮರ್ಶೆ – 3.5/5
ಕನ್ನಡ ಚಿತ್ರ: ದಬಾಂಗ್-3
ನಿರ್ದೇಶನ: ಪ್ರಭುದೇವ
ನಿರ್ಮಾಣ: ಸಲ್ಮಾನ್ ಖಾನ್, ಅರ್ಬಾಜ್ ಖಾನ್
ಸಂಗೀತ: ಸಾಜಿದ್-ವಾಜಿದ್
ಸಿನಿಮಾಟೋಗ್ರಫಿ
ತಾರಾಗಣ: ಸಲ್ಮಾನ್‌ಖಾನ್, ಸುದೀಪ್, ಸಾಯಿ ಮಂಜ್ರೇಕರ್, ಸೋನಾಕ್ಷಿ ಸಿನ್ಹಾ, ಮತ್ತಿತರರು
ರೇಟಿಂಗ್ : 3.5/5.
ಸಲ್ಮಾನ್‌ಖಾನ್ ರ ಹಿಂದಿನ ಎರಡು ದಬಾಂಗ್ ಗಳು ಸೂಪರ್ ಹಿಟ್ ಹಾಗಾಗಿ ಅವರು ಮೂರನೇ ದಬಾಂಗ್‌ನ್ನು ತೆರೆ ಮೇಲೆ ತಂದಿದ್ದು, ತಾವೇ ಸ್ವತಃ ಕಥೆಯನ್ನು ಬರೆದಿದ್ದಾರೆ. ಇದರ ಜತೆಗೆ ಸುದೀಪ್ ನಟಿಸಿದ್ದರು ಈ ಎಲ್ಲಾ ಕಾರಣಗಳಿಂದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿತ್ತು. ಅದರಂತೆ ತೆರೆ ಮೇಲೂ ಸಹ ದಬಾಂಗ್ ದರ್ಬಾರ್ ಜೋರಾಗಿದೆ.
ಸಿನಿಮಾ ಶುರುವಿನಿಂದ ಆರಂಭವಾಗುವ ಎಂಟರ್‌ಟೇನ್‌ಮೆಂಟ್ ಕೊನೆಯವರೆಗೂ ಭರ್ಜರಿಯಾಗಿ ಸಿಗುತ್ತದೆ. ಯಾವುದೇ ಲಾಜಿಕ್‌ಗಳಿಲ್ಲದೇ, ಪ್ರೇಕ್ಷಕರನ್ನು ರಂಜಿಸಲೇಂದೆ ಸಲ್ಲು ಈ ಕಥೆಯನ್ನು ಬರೆದಿದ್ದಾರೆ.
ಈ ಸಿನಿಮಾದಲ್ಲಿ ಮಾಮೂಲಿ ಸಿನಿಮಾಗಳಲ್ಲಿರುವಂತೆ ದ್ವೇಷ, ಫ್ಯಾಮಿಲಿ ಸೆಂಟಿಮೆಂಟ್, ಒಂದು ಲವ್ ಖಡಕ್ ವಿಲನ್ ಸೇರಿದಂತೆ ಎಲ್ಲವೂ ಇದೆ ಅದರ ಜತೆಗೆ ಹೇರಳವಾದಿ ಮನರಂಜನೆ ಇದೆ, ಜತೆಗೆ ಸ್ಟೈಲಿಷ್ ಆಗಿ ಮತ್ತು ಖಡಕ್ ಆಗಿ ನಟಿಸಿರುವ ಕಿಚ್ಚ ಸುದೀಪ್ ಇದ್ದಾರೆ. ಅವರಿಗೆ ಟಕ್ಕರ್ ಕೊಡಲು ಸಲ್ಮಾನ್ ಖಾನ್ ಇದ್ದಾರೆ ಜತೆಗೆ ಈ ಚಿತ್ರ ಉತ್ತಮ ಡಬ್ಬಿಂಗ್ ಕ್ವಾಲಿಟಿಯೊಂದಿಗೆ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿದೆ ಈ ಎಲ್ಲ ಕಾರಣಗಳಿಂದ ದಬಾಂಗ್3ಯನ್ನು ಕನ್ನಡಿಗರು ನೋಡಬೇಕು.
ಚುಲ್‌ಬುಲ್ ಪಾಂಡೆ, ಪೊಲೀಸ್ ಅಧಿಕಾರಿಯಾಗಿದ್ದೇಗೆ, ಅವನ ಫ್ಲ್ಯಾಶ್ ಬ್ಯಾಕ್ ಏನು ಎಂಬುದು ಈ ಬಾರಿ ಅನಾವರಣಗೊಂಡಿದೆ. ಸಲ್ಮಾನ್‌ಖಾನ್ ಯುವಕನಾಗಿಯೂ ಇಷ್ಟವಾಗುತ್ತಾರೆ, ಜವಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿಯೂ ಇಷ್ಟವಾಗುತ್ತಾರೆ. ಇನ್ನು ಸಿನಿಮಾದ ಎಲ್ಲ ಕಲಾವಿದರಿಗೆ ಕನ್ನಡ ಸಿನಿಮಾ ನಟರು ಡಬ್ಬಿಂಗ್ ಮಾಡಿರುವುದರಿಂದ ಸಿನಿಮಾ ನಮಗಿನ್ನೂ ಹತ್ತಿರವಾಗುತ್ತದೆ.
ಗುರುದತ್ ಗಾಣಿಗ ಕನ್ನಡ ಸಂಭಾಷಣೆಯನ್ನು , ಅನೂಪ್ ಭಂಡಾರಿ ಕನ್ನಡ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. ಇವರಿಬ್ಬರೇ ಈ ಸಿನಿಮಾವನ್ನು ಕನ್ನಡವಾಗಿಸಿರುವುದು. ಸೋನಾಕ್ಷಿ ಸಿನ್ಹಾಗಿಂತಲೂ ಸಾಯಿ ಮಂಜ್ರೇಕರ್ ಗಮನ ಸೆಳೆಯುತ್ತಾರೆ. ಸಾಜಿದ್ ವಾಜಿದ್‌ರ ಸಂಗೀತವೂ ಎಲ್ಲರಿಗೆ ಇಷ್ಟವಾಗುತ್ತದೆ. ಪ್ರಭುದೇವ ನಿರ್ದೇಶನವನ್ನು ಸಮರ್ಥವಾಗಿ ಮಾಡಿದ್ದಾರೆ, ಆದರೆ ಸಿನಿಮಾದ ಫಸ್ಟ್ ಹಾಫ್‌ನ್ನು ಇನ್ನಷ್ಟು ಕಡಿಮೆ ಮಾಡಿದ್ದರೆ ಖದರ್ ಕೊಂಚ ಹೆಚ್ಚಾಗುತ್ತಿತ್ತು. ಒಂದಷ್ಟು ಮೈನೆಸ್ ಪಾಯಿಂಟ್‌ಗಳಿದ್ದರೂ ಸಿನಿಮಾವನ್ನು ಒಮ್ಮೆ ನೋಡಬಹುದು.