Movie Reviews
ವಿಕೇಂಡ್‌ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
ಚಿತ್ರ: ವೀಕೆಂಡ್
ನಿರ್ದೇಶಕ: ಶ್ರಿಂಗೇರಿ ಸುರೇಶ್
ಸಂಗೀತ: ಮನೋಜ್ ಎಸ್
ತಾರಾಗಣ: ಮಿಲಿಂದ್, ಸಂಜನಾ ಬುರ್ಲಿ, ಗೋಪಿನಾಥ್, ವೀಣಾ, ಗೋಪಿನಾಥ್ ಭಟ್, ಶಿವು, ರಘು ನೀನಾಸಂ, ಅನಂತನಾಗ್
ರೇಟಿಂಗ್: 3.25/5
ಪ್ರತಿ ವಿಕೇಂಡ್‌ನಲ್ಲೂ ಸಾಕಷ್ಟು ಮಂದಿ ಸಾಫ್ಟ್ ವೇರ್ ಎಂಜಿನಿಯರ್‌ಗಳು ಕಾಲಕಳೆಯಲು ಬೆಂಗಳೂರಿನಿಂದ ಹೊರಗೆ ಹೋಗುತ್ತಾರೆ. ಅದಕ್ಕೆ ತಮ್ಮ ದುಡಿಮೆ ಅರ್ಧದಷ್ಟು ಹಣವನ್ನು ಅವರು ಖರ್ಚು ಮಾಡುತ್ತಾರೆ. ಆದರೆ ಈ ರೀತಿ ಖರ್ಚು ಮಾಡುತ್ತಿದ್ದ ಮಂದಿಗೆ ಹಣದ ಮಾರ್ಗ ಬಂದ್ ಆದಾಗ ಅವರ ಬದುಕಿಗೆ ಏನು ಮಾಡುತ್ತಾರೆ. ಹೈಫೈ ಲೈಫ್‌ಗೆ ಅಡ್ಜಸ್ಟ್ ಆದ ಎಷ್ಟೋ ಮಂದಿ ಆ ರೀತಿಯ ಜೀವನಕ್ಕೆಹಣ ಇರದೇ ಹೋದರೆ ಅವರ ಮನಸ್ಥಿತಿಯೇನು ಎಂಬುದನ್ನುಕಟ್ಟಿಕೊಟ್ಟಿರುವ ಸಿನಿಮಾವೇ ವಿಕೇಂಡ್.
ಅಜಯ್ (ಮಿಲಿಂದ್) ಸಾಫ್ಟ್‌ವೇರ್ ಎಂಜಿನಿಯರ್ ಈ ಚಿತ್ರದ ನಾಯಕ. ಈ ನಾಯಕನಿಗೆ ತನ್ನ ತಾತ ಮತ್ತು ತಾನು ಪ್ರೀತಿಸುತ್ತಿದ್ದ ಹುಡುಗಿಯೇ ಜೀವನ. ಇಂಥವನ ಬಾಳಲ್ಲಿ ಒಂದಷ್ಟು ಘಟನೆಯಿಂದ ಆತನ ಜೀವನಕ್ಕೆ ದೊಡ್ಡ ತಿರುವು ಸಿಗುತ್ತದೆ ಅದೇನು ಎಂಬುನ್ನು ಸಿನಿಮಾದಲ್ಲಿಯೇ ನೋಡಬೇಕು.
ಈ ಚಿತ್ರದ ಕಥೆ ಬದುಕಿಗೆ ಬಹಳ ಹತ್ತಿರವಾಗಿದೆ, ಹಾಗಾಗಿ ಸಿನಿಮಾದಲ್ಲಿ ಸಾಕಷ್ಟು ಆಪ್ತವಾಗುತ್ತದೆ. ಇದೆಲ್ಲದರ ಜತೆಗೆ ಸಿನಿಮಾದ ಕಡೆಯಲ್ಲಿ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಇದ್ದು, ಅದು ಸಹ ಚೆನ್ನಾಗಿದೆ.
ನಾಯಕ ನಟ ಮಿಲಿಂದ್‌ಗೆ ಇದು ಮೊದಲ ಸಿನಿಮಾ ಆದರೂ ಉತ್ತಮವಾಗಿ ನಟಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.
ಅನಂತನಾಗ್ ಅವರ ಅಭಿನಯ ವಿಶೇಷವಾಗಿದೆ. ಸಂಜನಾ ಬುರ್ಲಿ ಸೇರಿದಂತೆ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ಈ ವಿಕೇಂಡಾಗಿಯೇ ಈ ವಿಕೇಂಡ್ ಚಿತ್ರ ಮಾಡಿದ್ದು, ಎಲ್ಲರೂ ಮಿಸ್ ಮಾಡದೇ ನೋಡಬೇಕು.