Connect with us

News

ಸಂಗೀತ ಲೋಕದಲ್ಲಿ ವಿಜಯ್ ಪ್ರಕಾಶ್ ಹೊಸ ಅಧ್ಯಾಯ; ಮೂರು ಹೊಸ ಸಂಸ್ಥೆಗಳ ಆರಂಭ

Published

on

ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ವಿಜಯ್ ಪ್ರಕಾಶ್ ಸಂಗೀತ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಹಲವು ವರ್ಷಗಳ ಅನುಭವವನ್ನು ಸಂಗೀತಾಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ (VPCC), ದ್ವಾರ್ ಸ್ಟುಡಿಯೋಸ್ ಹಾಗೂ ದ್ವಾರ್ ಮ್ಯೂಸಿಕ್ ಎಂಬ ಮೂರು ಹೊಸ ಸಂಸ್ಥೆಗಳನ್ನು ಆರಂಭಿಸಿದ್ದಾರೆ.

ಹೊಸಕೆರೆಹಳ್ಳಿಯ ಸಪ್ತಗಿರಿ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ಈ ಕೇಂದ್ರಗಳ ಕುರಿತು ವಿಜಯ್ ಪ್ರಕಾಶ್ ಹಾಗೂ ಅವರ ಪತ್ನಿ ಮಹತಿ ವಿಜಯ್ ಪ್ರಕಾಶ್ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಭಾರತದಲ್ಲೇ ದೊಡ್ಡ ಸಂಗೀತ ಶಾಲೆ ಸ್ಥಾಪಿಸುವ ಕನಸಿನ ಮೊದಲ ಹೆಜ್ಜೆಯಾಗಿ VPCC ರೂಪುಗೊಂಡಿದ್ದು, ಸಂಗೀತ ಕಲಿಕೆ, ಹಾಡುಗಳ ನಿರ್ಮಾಣ ಮತ್ತು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ವಿಜಯ್ ಪ್ರಕಾಶ್ ತಿಳಿಸಿದರು.

ಮಹತಿ ವಿಜಯ್ ಪ್ರಕಾಶ್ ಮಾತನಾಡಿ, ಬಾಲ್ಯದಲ್ಲಿ ಇದ್ದ ಸಂಗೀತ ಮತ್ತು ಕಲೆಯ ಆಸಕ್ತಿ ಜೀವನದ ಜವಾಬ್ದಾರಿಗಳ ನಡುವೆ ಕಳೆದುಹೋಗುತ್ತದೆ. ಅಂತಹವರು ಮತ್ತೆ ತಮ್ಮ ಹವ್ಯಾಸದತ್ತ ಮರಳಲು VPCC ಉತ್ತಮ ವೇದಿಕೆಯಾಗಲಿದೆ ಎಂದರು. ಇಲ್ಲಿ ಮಕ್ಕಳು, ಗೃಹಿಣಿಯರು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರು ಸೇರಿದಂತೆ ನಾಲ್ಕು ವರ್ಷದಿಂದ 82 ವರ್ಷದವರೆಗಿನವರು ವಿವಿಧ ಸಂಗೀತ ಪ್ರಕಾರಗಳನ್ನು ಕಲಿಯುವ ಅವಕಾಶ ಪಡೆಯಲಿದ್ದಾರೆ ಎಂದು ಹೇಳಿದರು.

ದ್ವಾರ್ ಸ್ಟುಡಿಯೋಸ್‌ನಲ್ಲಿ ಆಸಕ್ತರು ತಮ್ಮದೇ ಹಾಡುಗಳನ್ನು ವೃತ್ತಿಪರ ರೀತಿಯಲ್ಲಿ ರೆಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಜೊತೆಗೆ ದ್ವಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ಹೊಸ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆಯೂ ರೂಪುಗೊಂಡಿದೆ. ಈಗಾಗಲೇ ಹಲವು ಗೀತೆಗಳನ್ನು ಬಿಡುಗಡೆ ಮಾಡಿರುವ ತಂಡ, ಇತ್ತೀಚೆಗೆ ತನುಷಾ ಕೆ.ಎಂ ಗಾಯನದ ಹಾಗೂ ಕೀರ್ತನ್ ಹೊಳ್ಳ ಸಂಗೀತ ಸಂಯೋಜಿಸಿರುವ ‘ಮೋಹ’ ಹಾಡನ್ನೂ ಅನಾವರಣಗೊಳಿಸಿದೆ.

Spread the love

Continue Reading