Connect with us

Cinema News

ಚಿತ್ರೀಕರಣ ಮುಕ್ತಾಯ: ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಾಲ್ಕು ಕಥೆಗಳ ‘ನಾಕು ತಂತಿ’

Published

on

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾವಸ್ತು ಹಾಗೂ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಪ್ರೇಕ್ಷಕರಿಂದ ಸದಾ ಪ್ರೋತ್ಸಾಹ ದೊರೆಯುತ್ತಿದೆ. ಈ ಸಾಲಿಗೆ ಸೇರುವ ನಿರೀಕ್ಷೆ ಮೂಡಿಸಿರುವ ಚಿತ್ರ ‘ನಾಕು ತಂತಿ’. ಸುರಂ ಮೂವೀಸ್ ಬ್ಯಾನರ್‌ನಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಡಿಕೆಎಸ್ ಪ್ರೊಡಕ್ಷನ್ಸ್‌ನ ಯೋಗೇಶ್ ಬಸವನಗೌಡ ಹಾಗೂ ಸಾಯಿಬಿಂದು ಪ್ರೊಡಕ್ಷನ್ಸ್‌ನ ನಂಬೂರು ಸಾಯಿ ಸಹ ನಿರ್ಮಾಪಕರಾಗಿದ್ದಾರೆ. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ. ಹಾಗೂ ಪ್ರೀತಮ್ ಶಿವಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಯುವ ಪತ್ರಕರ್ತೆಯರಾದ ಮಂಗಳಾ, ದೀಪಿಕಾ, ಸರೋಜ ಹಾಗೂ ಸ್ವಾತಿ ನಾಲ್ವರು ಸೇರಿ ಚಿತ್ರದ ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ನಿರ್ಮಾಪಕ ಜಯರಾಮ ದೇವಸಮುದ್ರ ಮಾತನಾಡಿ, ಹೊಸ ಪ್ರತಿಭೆಗಳು ಹಾಗೂ ಸದಭಿರುಚಿಯ ಕಂಟೆಂಟ್ ಹೊಂದಿರುವ ಚಿತ್ರಗಳಿಗೆ ಸುರಂ ಮೂವೀಸ್ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು. ‘ನಾಕು ತಂತಿ’ ಚಿತ್ರದ ಕಥೆ ತಮ್ಮ ಗಮನ ಸೆಳೆದ ಕಾರಣ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಹ ನಿರ್ಮಾಪಕ ಯೋಗೇಶ್ ಬಸವನಗೌಡ ಮಾತನಾಡಿ, ತಾವು ಮೂಲತಃ ರೈತರಾಗಿದ್ದು, ಸಿನಿಮಾ ಪ್ರೇಮಿಯಾಗಿ ಚಿತ್ರ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದಾಗಿ ತಿಳಿಸಿದರು. ಜಯರಾಮ ದೇವಸಮುದ್ರ ಅವರು ನಿರ್ಮಾಣಕ್ಕೆ ಕೈಜೋಡಿಸಿರುವುದು ಚಿತ್ರತಂಡಕ್ಕೆ ಹೆಚ್ಚಿನ ಬಲ ನೀಡಿದೆ ಎಂದರು. ಮತ್ತೊಬ್ಬ ಸಹ ನಿರ್ಮಾಪಕ ನಂಬೂರು ಸಾಯಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಾಲ್ವರು ನಿರ್ದೇಶಕರು ಮಾತನಾಡಿ, ಕಿರುಚಿತ್ರಗಳ ಮೂಲಕ ಅನುಭವ ಪಡೆದ ತಮಗೆ ಹಿರಿತೆರೆಯಲ್ಲಿ ಸಿನಿಮಾ ನಿರ್ದೇಶಿಸುವುದು ಬಹುದಿನಗಳ ಕನಸಾಗಿತ್ತು ಎಂದು ತಿಳಿಸಿದರು. ಮೊದಲ ಪ್ರಯತ್ನದಲ್ಲೇ ಒಬ್ಬೊಬ್ಬರು ಪ್ರತ್ಯೇಕವಾಗಿ ಪೂರ್ಣಪ್ರಮಾಣದ ಸಿನಿಮಾ ಮಾಡುವ ಬದಲು, ನಾಲ್ವರೂ ಸೇರಿ ನಾಲ್ಕು ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ಚಿತ್ರವನ್ನು ರೂಪಿಸಿದ್ದಾರೆ. ಮಧ್ಯಮ ವರ್ಗದ ಮಹಿಳೆಯರ ಬದುಕು, ಅವರು ಪ್ರತಿದಿನ ಎದುರಿಸುವ ಸವಾಲುಗಳು ಹಾಗೂ ಅವರ ಸುತ್ತಲಿನ ವಾಸ್ತವಿಕ ಘಟನೆಗಳನ್ನು ಆಧರಿಸಿದ ಮಹಿಳಾ ಪ್ರಧಾನ ಚಿತ್ರ ಇದಾಗಿದೆ ಎಂದು ವಿವರಿಸಿದರು. ನಾಲ್ಕು ಕಥೆಗಳಲ್ಲಿ ಖುಷಿ ರವಿ ನರ್ಸ್ ಆಗಿ, ರೋಷಿಣಿ ಪ್ರಕಾಶ್ ಐಟಿ ಉದ್ಯೋಗಿಯಾಗಿ, ಸಿಂಧು ಶ್ರೀನಿವಾಸಮೂರ್ತಿ ಮಹಿಳಾ ಟ್ರಾಫಿಕ್ ಪೊಲೀಸ್ ಆಗಿ ಹಾಗೂ ಸಂಗೀತಾ ಭಟ್ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಸು ಫ್ರಮ್ ಸೋ’ ಖ್ಯಾತಿಯ ಸುಮೇಧ್ ಕೆ. ಸಂಗೀತ ನೀಡಿದ್ದು, ರೊನದ ಬಕ್ಕೇಶ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ನಾಲ್ವರು ಛಾಯಾಗ್ರಾಹಕರು ಚಿತ್ರದ ಚಿತ್ರೀಕರಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ನಿರ್ಮಾಪಕರು ಹಾಗೂ ಸಹ ನಿರ್ಮಾಪಕರು ನೀಡಿದ ಅವಕಾಶಕ್ಕೆ ನಿರ್ದೇಶಕರು ಧನ್ಯವಾದ ಅರ್ಪಿಸಿದರು.

ತಮ್ಮ ಪಾತ್ರಗಳ ಕುರಿತು ಮಾತನಾಡಿದ ನಟಿಯರು ಚಿತ್ರದ ವಿಭಿನ್ನತೆಯನ್ನು ಹಂಚಿಕೊಂಡರು. ಸಿಂಧು ಶ್ರೀನಿವಾಸಮೂರ್ತಿ ಮಹಿಳಾ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದು, ಈ ಪಾತ್ರಕ್ಕಾಗಿ ಫೈಟ್ ದೃಶ್ಯಗಳಲ್ಲೂ ಅಭಿನಯಿಸಿರುವುದಾಗಿ ತಿಳಿಸಿದರು. ಖುಷಿ ರವಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಬರುವ ಸಿನಿಮಾ ತಂಡವನ್ನು ಸಾಮಾನ್ಯ ನರ್ಸ್ ಹೇಗೆ ಸ್ವಾಗತಿಸಿ ನೋಡಿಕೊಳ್ಳುತ್ತಾಳೆ ಎಂಬ ಅಂಶ ತಮ್ಮ ಪಾತ್ರದಲ್ಲಿದೆ ಎಂದರು. ರೋಷಿಣಿ ಪ್ರಕಾಶ್ ಐಟಿ ಉದ್ಯೋಗಿಯ ಪಾತ್ರ ನಿರ್ವಹಿಸಿದ್ದು, ಉದ್ಯೋಗ ದೊರೆತ ಬಳಿಕ ಆಕೆ ಕಾಣುವ ಕನಸುಗಳು ನನಸಾಗುತ್ತವೆಯೇ ಎಂಬುದನ್ನು ಚಿತ್ರದಲ್ಲಿ ನೋಡಬೇಕೆಂದು ಕುತೂಹಲ ಮೂಡಿಸಿದರು. ಸಂಗೀತಾ ಭಟ್ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯಾಗಿ ನಟಿಸಿದ್ದು, ಮನೆ, ಕುಟುಂಬ ಹಾಗೂ ದೈನಂದಿನ ಜವಾಬ್ದಾರಿಗಳ ನಡುವೆ ತನ್ನದೇ ಆದ ಜಗತ್ತನ್ನು ಕಟ್ಟಿಕೊಳ್ಳುವ ಮಹಿಳೆಯ ಬದುಕು ಅವರ ಕಥೆಯ ಕೇಂದ್ರವಾಗಿದೆ.

Spread the love

Continue Reading