Connect with us

Cinema News

ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಅಭಿನಯದ ‘ವಿಕ್ರಮ್ ವೇದಾಂತ್’ ಶುರು

Published

on

ತಾತ ಮತ್ತು ಮೊಮ್ಮಗನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಆಧರಿಸಿದ ‘ವಿಕ್ರಮ್ ವೇದಾಂತ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಮಧುರೇನಹಳ್ಳಿ ವಂಶಸ್ಥರು ಹಾಗೂ ಗುಬ್ಬಿ ನಾಟಕ ಕಂಪನಿಯ ಸ್ಥಾಪಕರಾದ ಚಂದಣ್ಣನವರ ಮೊಮ್ಮಗ ಬ್ರಹ್ಮದೇವಯ್ಯ ಅವರ ಬ್ರಹ್ಮದೇವ ಪ್ರೊಡಕ್ಷನ್ಸ್ ಮತ್ತು ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಅವರ ಸಹಯೋಗದಲ್ಲಿ, ಆದಿನಾಥ ಪಿಕ್ಚರ್ಸ್ ಲಾಂಛನದಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನವೀನ್ ಶಕ್ತಿ ನಿರ್ದೇಶನದ ಚಿತ್ರದ ಮುಹೂರ್ತ ಸಮಾರಂಭವು ಭಗವಾನ್ ಶ್ರೀ ಸುವರ್ಣ ಪಾರ್ಶ್ವನಾಥ ತೀರ್ಥಂಕರರ ದಿಗಂಬರ ಜೈನ ಬಸದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದು, ಚಿತ್ರಕ್ಕೆ ಶುಭ ಹಾರೈಸಿದರು.

‘ವಿಕ್ರಮ್ ವೇದಾಂತ್’ ಚಿತ್ರಕ್ಕೆ ‘ಹೆಸರಲ್ಲ ಒಂದು ಅಧ್ಯಾಯ’ ಎಂಬ ಅಡಿಬರಹವಿದೆ. ತಾತ–ಮೊಮ್ಮಗನ ನಡುವಿನ ಪ್ರೀತಿ, ಬಾಂಧವ್ಯ ಹಾಗೂ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ರೂಪಿಸಲಾಗಿದೆ. ಕುಣಿಗಲ್ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ. ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಹಾಗೂ ಸಂವಲ್ ಎಸ್. ಜೈನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಂವಲ್ ಎಸ್. ಜೈನ್ ಅವರಿಗೆ ಇದು ಮೂರನೇ ಚಿತ್ರವಾಗಿದ್ದು, ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ತಲುಪುವ ನಿರೀಕ್ಷೆ ಚಿತ್ರತಂಡಕ್ಕಿದೆ.

ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ನವೀನ್ ಶಕ್ತಿ, ಈ ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸುನೀಲ್ ಹೊನ್ನಾಳಿ ಛಾಯಾಗ್ರಹಣ ನಿರ್ವಹಿಸಲಿದ್ದು, ಅಕ್ಷತ ಎಸ್. ಜೈನ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುನಯ್ ಎಸ್. ಜೈನ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡುತ್ತಿದ್ದು, ಆರ್. ಮಹಾಂತೇಶ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಚಿತ್ರದ ಕಥೆಯನ್ನು ಭಾರತಿ ಎಸ್. ಬರೆದಿದ್ದಾರೆ ಎಂದು ವಿವರಿಸಿದರು.

ಚಿತ್ರದಲ್ಲಿ ತಾತನ ಪಾತ್ರ ನಿರ್ವಹಿಸುತ್ತಿರುವ ಶಿವಪ್ರದೀಪ್ ಮಾತನಾಡಿ, ತಾತ–ಮೊಮ್ಮಗನ ಸಂಬಂಧವನ್ನು ಆಧರಿಸಿರುವ ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂವಲ್ ಎಸ್. ಜೈನ್ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು. ವಿಭಿನ್ನ ಶೀರ್ಷಿಕೆ ಮತ್ತು ಕೌಟುಂಬಿಕ ಭಾವನೆಗಳನ್ನು ಒಳಗೊಂಡಿರುವ ‘ವಿಕ್ರಮ್ ವೇದಾಂತ್’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮನಮುಟ್ಟುವ ಕಥೆಯನ್ನು ನೀಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಮುಂದಿನ ಹಂತದ ಚಿತ್ರೀಕರಣ ಹಾಗೂ ಇತರ ಮಾಹಿತಿಗಳಿಗಾಗಿ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

Spread the love

Continue Reading