Connect with us

News

‘ಟಾಕ್ಸಿಕ್’ ಸಿನಿಮಾದ ಪ್ರಭಾವ ಗೇಮಿಂಗ್ ಜಗತ್ತಿಗೂ; ಯಶ್ x ಬಿಜಿಎಂಐ ಕೊಲಾಬರೇಷನ್ ಸದ್ದು

Published

on

ಭಾರತದ ಜನಪ್ರಿಯ ಮೊಬೈಲ್ ಗೇಮ್ *ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI)* ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ *‘ಟಾಕ್ಸಿಕ್’* ನಡುವೆ ವಿಶೇಷ ಸಹಭಾಗಿತ್ವ ಘೋಷಣೆಯಾಗಿದೆ. ಬಿಜಿಎಂಐನ ಹೊಸ 4.4 ಅಪ್ಡೇಟ್‌ನ ಭಾಗವಾಗಿ ಪರಿಚಯಿಸಲಾದ *“ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್”* ಅಭಿಯಾನವು ಗೇಮಿಂಗ್ ಮತ್ತು ಮನರಂಜನಾ ಕ್ಷೇತ್ರದ ದೊಡ್ಡ ಸಹಯೋಗಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಈ ಸಹಭಾಗಿತ್ವದ ಪ್ರಮುಖ ಆಕರ್ಷಣೆಯಾಗಿ ಯಶ್ ಅವರ ಧ್ವನಿಯಲ್ಲಿ ರೂಪುಗೊಂಡಿರುವ ವಿಶೇಷ ವಾಯ್ಸ್ ಪ್ಯಾಕ್‌ಗಳು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿವೆ. ಜೊತೆಗೆ ‘ಟಾಕ್ಸಿಕ್’ ಚಿತ್ರದ ಜಗತ್ತಿನಿಂದ ಪ್ರೇರಿತವಾದ ಹಲವು ಇನ್-ಗೇಮ್ ಕಲೆಕ್ಟಿಬಲ್ಸ್ ಹಾಗೂ ವಿಶೇಷ ರಿವಾರ್ಡ್‌ಗಳನ್ನು ಆಟಗಾರರು ಪಡೆದುಕೊಳ್ಳುವ ಅವಕಾಶವೂ ಇದೆ. ಇದರಿಂದ ಗೇಮರ್‌ಗಳಿಗೆ ಸಿನಿಮಾ ಮತ್ತು ಗೇಮ್‌ಗಳ ಅನುಭವ ಒಂದೇ ವೇದಿಕೆಯಲ್ಲಿ ಸಿಗಲಿದೆ.

ಖ್ಯಾತ ನಿರ್ದೇಶಕಿ ಗೀತು ಮೋಹನದಾಸ್ ನಿರ್ದೇಶನದ *‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’* ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಈ ಪ್ರಚಾರ ಕಾರ್ಯವನ್ನು ಎರಡು ಹಂತಗಳಲ್ಲಿ ರೂಪಿಸಲಾಗಿದೆ. ಮೊದಲ ಹಂತವು ಮೇ 28ರಿಂದ ಆರಂಭವಾಗಿದ್ದು, *ಟಾಕ್ಸಿಕ್ ಎಕ್ಸ್‌ಚೇಂಜ್ ಈವೆಂಟ್* ಮೂಲಕ ಆಟಗಾರರು ವಿವಿಧ ಮಿಷನ್‌ಗಳನ್ನು ಪೂರ್ಣಗೊಳಿಸಿ ಟಾಕ್ಸಿಕ್ ಡ್ಯಾಡಿ ಟ್ರೆಂಚ್ ಕೋಟ್, ಟಾಕ್ಸಿಕ್ ಪ್ಯಾರಾಶೂಟ್, ಅವತಾರ್, ಅವತಾರ್ ಫ್ರೇಮ್ ಹಾಗೂ ಇತರ ವಿಶೇಷ ಉಡುಗೊರೆಗಳನ್ನು ಗೆಲ್ಲಬಹುದಾಗಿದೆ. ಇದೇ ವೇಳೆ ಸೀಮಿತ ಅವಧಿಯ ಕನ್ನಡ ಮತ್ತು ಹಿಂದಿ ವಾಯ್ಸ್ ಪ್ಯಾಕ್‌ಗಳೂ ಲಭ್ಯವಾಗುತ್ತವೆ.

ಎರಡನೇ ಹಂತವು ಜೂನ್ 2ರಿಂದ ಆರಂಭವಾಗಲಿದ್ದು, ಈ ವೇಳೆ *ಟಾಕ್ಸಿಕ್ ವಾಯ್ಸ್ ಪ್ಯಾಕ್ ಕ್ರೇಟ್* ಗೇಮ್‌ನಲ್ಲಿ ಪರಿಚಯಗೊಳ್ಳಲಿದೆ. ಇದರ ಮೂಲಕ ಗೇಮರ್‌ಗಳು ಯಶ್ ಅವರ ಖಡಕ್ ಧ್ವನಿಯ ವಿಶೇಷ ಸಂಭಾಷಣೆಗಳನ್ನು ಬಳಸುವ ಅವಕಾಶ ಪಡೆಯಲಿದ್ದಾರೆ. ಸಹಯೋಗದ ಭಾಗವಾಗಿ ಯಶ್ ಅಭಿನಯದ ವಿಶೇಷ ಪ್ರೋಮೋ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದ್ದು, ಇದು ಗೇಮಿಂಗ್ ಅಭಿಯಾನಕ್ಕೆ ಸಿನೆಮಾ ಸ್ಪರ್ಶ ನೀಡಿದೆ.

ಈ ಕುರಿತು ಮಾತನಾಡಿರುವ ಯಶ್, ಇಂದಿನ ಯುವಜನತೆ ಹೊಸತನ, ರೋಚಕತೆ ಮತ್ತು ವಿಶಿಷ್ಟ ಅನುಭವಗಳನ್ನು ಬಯಸುತ್ತಿದ್ದು, ಆ ಮನೋಭಾವ ‘ಟಾಕ್ಸಿಕ್’ ಚಿತ್ರದ ತತ್ವಕ್ಕೂ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ. ಕ್ರಾಫ್ಟನ್ ಇಂಡಿಯಾದ ಪ್ರತಿನಿಧಿಗಳು ಕೂಡ ಯಶ್ ಅವರ ಅಪಾರ ಜನಪ್ರಿಯತೆ ಮತ್ತು ಯುವ ಸಮುದಾಯದೊಂದಿಗೆ ಇರುವ ಬಾಂಧವ್ಯ ಈ ಸಹಯೋಗವನ್ನು ಮತ್ತಷ್ಟು ವಿಶೇಷಗೊಳಿಸಿದೆ ಎಂದು ತಿಳಿಸಿದ್ದಾರೆ. 26 ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿರುವ ಬಿಜಿಎಂಐ ಈಗ ಕೇವಲ ಗೇಮ್ ಆಗಿರದೇ, ಯುವಜನರ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ವೇದಿಕೆಯಾಗಿದ್ದು, ಈ ಸಹಭಾಗಿತ್ವ ಅದರ ಮತ್ತೊಂದು ಮೈಲಿಗಲ್ಲಾಗಿದೆ.

Spread the love

Continue Reading