Cinema News
ಸುದೀಪ್ ನನ್ನ ಚಿಕ್ಕ ತಮ್ಮ ಎಂದ ಸಲ್ಮಾನ್ಖಾನ್

ಸುದೀಪ್ ಬರೀ ಹೀರೋ ಅಥವಾ ವಿಲನ್ ಅವರು ನನ್ನ ಚಿಕ್ಕ ತಮ್ಮ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಚಿತ್ರದಲ್ಲಿ ಸುದೀಪ್ ಅವರನ್ನು ನಾವು ವಿಲನ್ ರೀತಿ ಟ್ರೀಟ್ ಮಾಡಿಲ್ಲ, ಬದಲಿಗೆ ಅವರು ನಮಗೆ ಸೂಪರ್ ಸ್ಟಾರ್ ಇದ್ದ ಹಾಗೆ ಜತಗೆ ನನ್ನ ಚಿಕ್ಕ ತಮ್ಮ ಎಂದು ಹೇಳಿದರು.
ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಬೆಂಗಳೂರಿನ ಬಗ್ಗೆ ಬಹಳಷ್ಟು ಮಾತನಾಡಿದರು. ದಬಾಂಗ್-3ಯನ್ನು ಕನ್ನಡಕ್ಕೆ ನಿಮಗಾಗಿ ತಂದಿದ್ದೇನೆ ದಯವಿಟ್ಟು ನೋಡಿ ಎಂದು ಹೇಳಿದರು.
ಇದೇ ಶುಕ್ರವಾರ ದಬಾಂಗ್-3 ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರದಲ್ಲಿ ನಟಿಸಿದ್ದಾರೆ.

Continue Reading