Cinema News
‘ಅವತಾರ್‌ಪುರಷ’ದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆ

ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಶನ್‌ನ ‘ಅವತಾರ್ ಪುರುಷ’ ಸಿನಿಮಾ ಟೀಮ್‌ಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ.
ಈ ಸಿನಿಮಾದಲ್ಲಿ ಸಾಯಿಕುಮಾರ್ ಬಹಳ ವಿಶೇಷವಾದ ಪಾತ್ರದಲ್ಲಿ ನಟಿಸುತ್ತಿದ್ದು, ಅದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಹಾರರ್ ಕಾಮಿಡಿ ಇದೆಯಂತೆ. ಈಗಾಗಲೇ ಶೇ. 70ರಷ್ಟು ಚಿತ್ರೀಕರಣ ಮುಗಿದಿದ್ದು, ಅಕ್ಟೋಬರ್ ಅಷ್ಟೊತ್ತಿಗೆ ಚಿತ್ರ ಬಿಡುಗಡೆಯಾಗಲಿದೆ ಎನ್ನುತ್ತದೆ ಚಿತ್ರತಂಡ.

ಈ ಹಿಂದೆ ಶರಣ್ ನಟನೆಯ ಸಿನಿಮಾಗಳಲ್ಲಿ ಸಾಯಿಕುಮಾರ್ ಸಹೋದರ ರವಿಶಂಕರ್ ನಟಿಸುತ್ತಿದ್ದರು, ಅವರ ಕಾಂಬಿನೇಶನ್ ದೊಡ್ಡ ಮಟ್ಟದಲ್ಲಿ ವರ್ಕೌಟ್ ಆಗಿತ್ತು, ಈಗ ಸಾಯಿಕುಮಾರ್ ಶರಣ್ ಜತೆ ಸೇರಿಕೊಂಡಿದ್ದು, ಇವರಿಬ್ಬರ ಕಾಂಬಿನೇಶನ್ ಸಹ ಹಿಟ್ ಆಗುತ್ತದೆ ಎಂಬ ನಂಬಿಕೆ ನಿರ್ದೇಶಕ ಸುನಿಯವರದ್ದು.
ಈ ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ರ್ಯಾಂಬೋ -2 ಖ್ಯಾತಿಯ ಆಶಿಕಾ ರಂಗನಾಥ್ ಇದ್ದಾರೆ.

Continue Reading