Cinema News
ಡಿಸೆಂಬರ್ ಮೂರನೇ ವಾರದಿಂದ ರುದ್ರಪ್ರಯಾಗ ಆರಂಭ

ರಿಷಭ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ರುದ್ರಪ್ರಯಾಗ ಸಿನಿಮಾ ಡಿಸೆಂಬರ್ ಮೂರನೇ ವಾರದಿಂದ ಆರಂಭವಾಗಲಿದ್ದು, ರಿಷಭ್ ಅ್ಯಂಡ್ ಗ್ಯಾಂಗ್ ಅದರ ತಯಾರಿಯಲ್ಲಿದೆ.
ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಗುಲ್ಷನ್ ದೇವಯ್ಯ ಮತ್ತು ಅನಂತ್‌ನಾಗ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಂಪ್ಲೀಟ್ ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. ಉತ್ತರ ಪ್ರದೇಶದ ರುದ್ರಪ್ರಯಾಗದಲ್ಲಿ ನಾಲ್ಕೖದು ದಿನ ಚಿತ್ರೀಕರಣವನ್ನು ರಿಷಭ್ ಶೆಟ್ಟಿ ಮಾಡಲಿದ್ದಾರೆ. ಇದಾದ ಮೇಲೆ ದಾಂಡೇಲಿ, ಖಾನಾಪುರ, ಬೆಳಗಾವಿ ಕಾಡುಗಳಲ್ಲಿ ಶೂಟಿಂಗ್ ಮಾಡಲಿದ್ದಾರಂತೆ.

ಇದು ನನ್ನ ಕರಿಯರ್‌ನಲ್ಲಿ ಬೇರೆ ಥರಹದ ಸ್ಕ್ರಿಪ್ಟ್ ಆಗಿದೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದು ಮಲೆನಾಡಿನ ಕಡೆಯಲ್ಲೆಲ್ಲ ಲೋಕೆಶನ್ ನೋಡಿಕೊಂಡು ಬಂದಿದ್ದೇವೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಸಿನಿಮಾ ಇದಾಗಲಿದೆ ಎನ್ನುತ್ತಾರೆ ರಿಷಭ್ ಶೆಟ್ಟಿ.
ಇನ್ನು ರಿಷಭ್ ಶೆಟ್ಟಿ ಸಾರಥ್ಯದಲ್ಲಿ ತಯಾರಾಗಿರುವ ಕಥಾ ಸಂಗಮ ಇದೇ ಡಿಸೆಂಬರ್ 6 ಕ್ಕೆ ಬಿಡುಗಡೆಯಾಗಲಿದೆ. ಅದರ ಪ್ರಚಾರದ ಕೆಲಸದಲ್ಲಿ ಅವರು ಬಿಝಿ ಇದ್ದು, ಇದು ರಿಲೀಸ್ ಆದ ಕೂಡಲೇ ಅವರು ಕಾಡಿನೊಳಗೆ ಎಂಟ್ರಿ ಕೊಡಲಿದ್ದಾರೆ.
