Television News
ದುಬಾರಿ ಕಾರ್ ಗಾಗಿ ಗಂಡನಿಗೆ ಕೈ ಕೊಟ್ಟ ರಾಖಿ ಸಾವಂತ್?

ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗೆ ಪ್ರತಿದಿನ ಸುದ್ದಿಯಾಗ್ತಿದ್ದಾರೆ. ಮೈಸೂರಿನ ಹುಡುಗ ಆದಿಲ್ ಜೊತೆ ಸುತ್ತಾಡುತ್ತಿರುವ ರಾಖಿ ನಿತ್ಯ ಒಂದಲ್ಲ ಒಂದು ವಿಷಯದ ಮೂಲಕ ಮಾಧ್ಯಮಗಳ ಮುಂದೆ ಬರ್ತಿದ್ದಾರೆ. ಇತ್ತೀಚೆಗೆ ತಮ್ಮ ಮಾಜಿ ಪತಿಯ ಬಗ್ಗೆ ಮಾತನಾಡುತ್ತ ರಾಖಿ ಕಣ್ಣೀರು ಹಾಕಿದ್ದರು. ಇದೀಗ ರಾಕಿ ಮಾಜಿ ಪತಿ ತಮ್ಮನ್ನು ರಾಕಿ ಸಾವಂತ್ ಯಾಕೆ ಬಿಟ್ಟು ಹೋದಳು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ರಾಖಿ ಸಾವಂತ್ ಮಾಜಿ ಪತಿಯ ವಿರುದ್ಧ ಮುಂಬೈನಲ್ಲಿ ದೂರು ನೀಡಿದ್ದರು. ಮಾಜಿ ಪತಿಯಿಂದಾಗಿ ನನಗೆ ಕಿರುಕುಳ ಆಗುತ್ತಿದೆ ಎಂದಿದ್ದರು. ಅಲ್ಲದೆ
ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಿತೇಶ್ ಕಿರುಕುಳವನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಪೊಲೀಸರ ಮುಂದೆ ಗಳಗಳನೆ ಅತ್ತಿದ್ದರು. ಇದೀಗ ರಿತೀಶ್ ಮಾಜಿ ಪತ್ನಿಯ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ರಾಖಿ ತುಂಬಾ ದುಬಾರಿ ಕಾರು ಕೊಡಿಸುವಂತೆ ಪೀಡಿಸುತ್ತಿದ್ದರು. ಆಕೆಗೆ ಹಣದ ದಾಹ ಹೆಚ್ಚಾಗಿತ್ತು. ನಾನು ಅವಳು ಕೇಳಿದ ಕಾರನ್ನು ಕೊಡಿಸಲಿಲ್ಲ. ಹಾಗಾಗಿ ಅವರು ನನ್ನ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಮತ್ತು ಸೇಡು ತೀರಿಸಿಕೊಳ್ಳುವೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.
