Connect with us

Cinema News

ಟ್ರೆಂಡಿ ಹಾಡಿನ ಮೂಲಕ ಮತ್ತೆ ಸದ್ದು ಮಾಡುತ್ತಿರುವ “ಸಿಟಿಲೈಟ್ಸ್”

Published

on

ದುನಿಯಾ ವಿಜಯ್ ನಿರ್ದೇಶನದ “ಸಿಟಿಲೈಟ್ಸ್” ಚಿತ್ರದ ಮೊದಲ ಹಾಡು “ಬಾವ ಬಾವ” ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ರ್ಯಾಪ್ ಶೈಲಿಯ ಈ ಹಾಡಿನ ಮೂಲಕ ಹೊಸ ಪ್ರತಿಭೆ ಅಂಕಿತ್ ಕುಮಾರ್ ಬಾವರನ್ನು ಚಿತ್ರತಂಡ ಪರಿಚಯಿಸಿದೆ. ಸುದ್ದಿಗೋಷ್ಠಿಯಲ್ಲಿ ಹಾಡು ಅನಾವರಣಗೊಂಡಿದ್ದು, ದುನಿಯಾ ವಿಜಯ್ ಮತ್ತೊಮ್ಮೆ ಟ್ರೆಂಡಿಂಗ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ದುನಿಯಾ ವಿಜಯ್ ಪ್ರತಿಯೊಂದು ಹಾಡಿನ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುತ್ತಾರೆ ಎಂದು ಹೇಳಿದರು. ಅವರು ನೀಡುವ ಸೂಚನೆಗಳು ಸಂಗೀತ ಸಂಯೋಜನೆಗೆ ಹೆಚ್ಚಿನ ಸಹಾಯ ಮಾಡುತ್ತವೆ ಎಂದರು. ಹಾಡಿನ ಸಾಹಿತ್ಯ ಬರೆದು ಹಾಡಿರುವ ಅಂಕಿತ್ ಕುಮಾರ್ ಬಾವ, ತಮ್ಮ ಹಳೆಯ ಹಾಡುಗಳನ್ನು ನೋಡಿ ಚಿತ್ರತಂಡ ಅವಕಾಶ ನೀಡಿದ್ದು ಸಂತಸದ ವಿಚಾರ ಎಂದು ಹೇಳಿದರು. ವಿಜಯ್ ಸರ್‌ರಿಂದ ಅವಕಾಶ ಸಿಗುತ್ತದೆ ಎಂದು ಊಹಿಸಿರಲಿಲ್ಲ ಎಂದರು.

ನಟ ವಿನಯ್ ರಾಜ್‌ಕುಮಾರ್ ಮಾತನಾಡಿ, ಚರಣ್ ರಾಜ್ ಬಳಿ ಒಳ್ಳೆಯ ಹಾಡೊಂದನ್ನು ಕೇಳಿದ್ದೆ, ಆದರೆ ಅವರು ಐದು ಅದ್ಭುತ ಹಾಡುಗಳನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಟಿ ಮೋನಿಷಾ ವಿಜಯ್‌ಕುಮಾರ್, ವಿನಯ್ ರಾಜ್‌ಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿದ್ದು, ಸಿನಿಮಾ ಮೂಲಕ ಅನೇಕ ಹೊಸ ವಿಷಯಗಳನ್ನು ಕಲಿತಿದ್ದೇನೆ ಎಂದರು.

ನಟ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ರ್ಯಾಪ್ ಹಾಡುಗಳು ಸಾಮಾನ್ಯವಾಗಿ ನೋವು ಮತ್ತು ಹೋರಾಟವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿವೆ ಎಂದರು. “ಸಿಟಿಲೈಟ್ಸ್” ಸಿನಿಮಾದಲ್ಲೂ ಬದುಕಿನ ಕಷ್ಟಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ಈ ಕಥೆಗೆ ವಿನಯ್ ರಾಜ್‌ಕುಮಾರ್ ಸೂಕ್ತ ವ್ಯಕ್ತಿ ಎಂದು ತಿಳಿಸಿದರು. “ಜವಾಬ್ದಾರಿ… ದೀಪಗಳು” ಎಂಬ ಅಡಿಬರಹ ಹೊಂದಿರುವ ಈ ಚಿತ್ರ, ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಯುವಕರು ಎದುರಿಸುವ ಸಂಕಷ್ಟಗಳ ಕಥೆಯನ್ನು ಒಳಗೊಂಡಿದೆ. ಶಿವಸೇನಾ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ದುನಿಯಾ ಟಾಕೀಸ್ ಹಾಗೂ ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಮತ್ತು ವಿಕ್ರಂ ಆರ್ಯಾ ನಿರ್ಮಾಣ ಮಾಡುತ್ತಿದ್ದಾರೆ.

Spread the love

Continue Reading