Connect with us

Cinema News

ರಾಗಿಣಿ ಹುಟ್ಟುಹಬ್ಬಕ್ಕೆ “ರಾಗಿಣಿ ಐಪಿಎಸ್ ೨” ಘೋಷಣೆ

Published

on

ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾದ ಘೋಷಣೆ ನಡೆದಿದ್ದು, “ರಾಗಿಣಿ ಐಪಿಎಸ್ ೨” ಚಿತ್ರದ ಮೂಲಕ ಅವರು ಮತ್ತೆ ಅದೇ ಖ್ಯಾತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ಸು ಕಂಡ “ರಾಗಿಣಿ ಐಪಿಎಸ್” ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಹೆಚ್ಚಿಸಿದೆ. ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ಈ ಚಿತ್ರದ ವಿಶೇಷವೆಂದರೆ ನಟರಾಗಿ ಗುರುತಿಸಿಕೊಂಡಿರುವ ಗುರುರಾಜ್ ಜಗ್ಗೇಶ್ ಮತ್ತು ಯತಿರಾಜ್ ಜಗ್ಗೇಶ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. 2019ರಿಂದಲೇ ನಿರ್ದೇಶನದತ್ತ ಗಮನ ಹರಿಸಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. “ರಾಗಿಣಿ ಐಪಿಎಸ್ ೨” ಮೊದಲ ಭಾಗ ಎಲ್ಲಿ ಅಂತ್ಯಗೊಂಡಿತ್ತೋ ಅಲ್ಲಿಂದಲೇ ಕಥೆ ಮುಂದುವರೆಯಲಿದ್ದು, ಹೊಸ ಶೈಲಿಯ ನಿರೂಪಣೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ ಎಂದಿದ್ದಾರೆ.

ಮಾಧ್ಯಮಗಳ ಸಹಕಾರದಿಂದಲೇ ನಾನು ಇಷ್ಟು ದೂರ ಬಂದಿದ್ದೇನೆ. ಅದಕ್ಕಾಗಿಯೇ ನನ್ನ ಹುಟ್ಟುಹಬ್ಬದ ದಿನವೇ ಚಿತ್ರದ ಘೋಷಣೆಯನ್ನು ಎಲ್ಲರ ಸಮ್ಮುಖದಲ್ಲಿ ಮಾಡುತ್ತಿದ್ದೇವೆ ಎಂದು ರಾಗಿಣಿ ದ್ವಿವೇದಿ ಸಂತಸ ಹಂಚಿಕೊಂಡರು. ಜಗ್ಗೇಶ್ ಪುತ್ರರು ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ಹಾಗೂ ಕೆ.ಮಂಜು ನಿರ್ಮಾಣದಲ್ಲಿ ಜೊತೆಯಾಗಿರುವುದು ಇನ್ನಷ್ಟು ಖುಷಿ ನೀಡಿದೆ ಎಂದರು.

ನಿರ್ಮಾಪಕ ಕೆ.ಮಂಜು ಮಾತನಾಡಿ, ರಾಗಿಣಿ ಅವರು ನಾಯಕಿಯಾಗಿ ಬಂದ ದಿನಗಳಿಂದಲೇ ಅವರನ್ನು ಪರಿಚಯವಿದೆ. ಇತ್ತೀಚೆಗೆ ಅವರು ಕರೆ ಮಾಡಿ ನಿರ್ದೇಶಕರು ಕಥೆ ಹೇಳಲು ಬರುತ್ತಾರೆ ಎಂದಿದ್ದರು. ನಂತರ ಗುರುರಾಜ್ ಮತ್ತು ಯತಿರಾಜ್ ಬಂದು “ರಾಗಿಣಿ ಐಪಿಎಸ್ ೨” ಕಥೆ ವಿವರಿಸಿದರು. ಕಥೆಯ ಕಂಟೆಂಟ್ ಬಹಳ ಆಸಕ್ತಿದಾಯಕವಾಗಿದೆ. ಆದಷ್ಟು ಬೇಗ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ಸುಬ್ರಹ್ಮಣ್ಯ ಕೂಡ ಉಪಸ್ಥಿತರಿದ್ದರು.

Spread the love

Continue Reading