Connect with us

Cinema News

ಪ್ಯಾನ್ ಇಂಡಿಯಾ ‘ಪ್ಯಾರಾಡಾಕ್ಸ್’ಗೆ ಮುಹೂರ್ತ; ಹನ್ಸಿಕಾ-ಸೋನು ಸೋದ್ ಒಂದೇ ಚಿತ್ರದಲ್ಲಿ

Published

on

ಕ್ಯಾಪ್ಟನ್ ಕಿಶೋರ್ ನಿರ್ದೇಶನದ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ *’ಪ್ಯಾರಾಡಾಕ್ಸ್’*ಗೆ ಬೆಂಗಳೂರಿನ ಮುದ್ದಿನಪಾಳ್ಯದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ, ನಟ ಸೋನು ಸೂದ್, ರವಿಶಂಕರ್ ಸೇರಿದಂತೆ ಹಲವು ಭಾಷೆಗಳ ಕಲಾವಿದರು ಅಭಿನಯಿಸುತ್ತಿರುವ ಈ ಚಿತ್ರ ಮಹಿಳಾ ಪ್ರಧಾನ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕ್ಯಾಪ್ಟನ್ ಕಿಶೋರ್, ಅಂಗಾಂಗ ಕಳ್ಳತನ (ಆರ್ಗನ್ ಸ್ಕ್ಯಾಮ್) ಹಿನ್ನೆಲೆಯ ಕಥೆಯನ್ನು ಸಿನಿಮಾ ಹೇಳಲಿದ್ದು, ಇಂಗ್ಲಿಷ್ ಸಿನಿಮಾಗಳ ಶೈಲಿಯ ಚಿತ್ರಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದರು. ನಿರ್ದೇಶಕರಾಗುವ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದಿದ್ದ ಅವರು, ಹಲವು ವರ್ಷಗಳ ಅನುಭವದ ಬಳಿಕ ಇದೀಗ ಸ್ವತಂತ್ರ ನಿರ್ದೇಶಕರಾಗಿ ಮೊದಲ ಸಿನಿಮಾ ಕೈಗೆತ್ತಿಕೊಂಡಿರುವ ಸಂತಸ ಹಂಚಿಕೊಂಡರು.

ನಿರ್ಮಾಪಕ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಪ್ಯಾರಾಡಾಕ್ಸ್’ ಸಾಮಾನ್ಯ ಸಿನಿಮಾ ಅಲ್ಲ. ಎಲ್ಲಾ ಭಾಷೆಗಳ ಪ್ರೇಕ್ಷಕರಿಗೂ ತಲುಪುವ ಕಥೆ ಹೊಂದಿದ್ದು, ಹಾಲಿವುಡ್ ಮಟ್ಟದ ತಾಂತ್ರಿಕ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಸುಮಾರು 16 ಪ್ರಮುಖ ಕಲಾವಿದರು ಚಿತ್ರದ ಭಾಗವಾಗಿದ್ದು, ಅದ್ದೂರಿ ಮನರಂಜನಾ ಅನುಭವ ನೀಡುವ ಉದ್ದೇಶದಿಂದ ಯಾವುದೇ ರಾಜಿ ಇಲ್ಲದೆ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಮುಹೂರ್ತ ಸಮಾರಂಭದಲ್ಲಿ ಮುರಳಿ ಮಾಸ್ಟರ್, ಗಣೇಶ್ ಮಾಸ್ಟರ್, ರಾಮು ಮಾಸ್ಟರ್ ಸೇರಿದಂತೆ ಹಲವು ನೃತ್ಯ ನಿರ್ದೇಶಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಯಿರಾಮ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಾಹಸ ನಿರ್ದೇಶಕ ರವಿವರ್ಮ, ಛಾಯಾಗ್ರಾಹಕ ರಾಜು ಹಾಗೂ ಸಂಕಲನಕಾರ ದೀಪಕ್ ಚಿತ್ರಕ್ಕೆ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಐದು ಅದ್ದೂರಿ ಸಾಹಸ ದೃಶ್ಯಗಳು ಇರಲಿದ್ದು, ಭರ್ಜರಿ ಆಕ್ಷನ್ ಅನುಭವ ನೀಡಲಿವೆ ಎಂದು ರವಿವರ್ಮ ತಿಳಿಸಿದ್ದಾರೆ.

Spread the love

Continue Reading