News
ಫೆ.7ಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ರಿಲೀಸ್

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್ ಆಗಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.
ಎಸಿಪಿ ಉಮೇಶ್ ಅವರ ಪುತ್ರ ಸಪ್ತಮಿ ಉಮೇಶ್ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್ ಸಂಗೀತ ನೀಡಿದ್ದಾರೆ.

Continue Reading