Cinema News
‘ಪೈಲ್ವಾನ್’ಗಿರಿಗೆ ಫಿದಾ ಆದ ಬಾಲಿವುಡ್ ಆಡಿಯನ್ಸ್

ಕಿಚ್ಚ ಸುದೀಪ್ ನಟನೆಯ ಬಹುಭಾಷಾ ಚಿತ್ರ ‘ಪೈಲ್ವಾನ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಿಂದಿ ಟ್ರೇಲರ್ಗೆ ಮನಸೋತಿರುವ ಬಾಲಿವುಡ್ ಪ್ರೇಕ್ಷಕರು 1 ಕೋಟಿ ವಿವ್ಸ್ ದೊರೆಕಿದ್ದು, ಸತತ 6 ದಿನಗಳಿಂದ ಟ್ರೆಂಡ್ ಆಗ್ತಿದೆ.
ಈ ಟ್ರೇಲರ್‌ನಲ್ಲಿ ಸುದೀಪ್, ಸುನೀಲ್ ಶೆಟ್ಟಿ ಸೇರಿದಂತೆ ಎಲ್ಲ ಕಲಾವಿದರ ಪರಿಚಯವನ್ನು ಮಾಡಲಾಗಿದೆ. ಜತೆಗೆ ಇದು ಕುಸ್ತಿ ಮತ್ತು ಬಾಕ್ಸಿಂಗ್ ಎರಡು ಇರುವ ಕಥೆ ಎಂಬುದು ಗೊತ್ತಾಗುತ್ತದೆ.

ಇನ್ನು ಈ ಟ್ರೇಲರ್,ಕನ್ನಡ,ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯೂ ಲಕ್ಷಾಂತರ ಮಂದಿ ನೋಡಿದ್ದಾರೆ.ಇನ್ನು ಈ ಟ್ರೇಲರ್‌ನ್ನು ನೋಡಿದ ತೆಲುಗಿನ ರಾಜಮೌಳಿ ಖುಷಿಯಿಂದ ಟ್ವೀಟರ್‌ನಲ್ಲಿ ಟ್ರೇಲರ್ ನ್ನುಶೇರ್ ಮಾಡಿದ್ದಾರೆ.
ರಾಜಮೌಳಿ, ತಮಿಳಿನ ಶಿವಕಾರ್ತಿಕೇಯನ್ ಸೇರಿದಂತೆ ಎಲ್ಲರೂ ಸುದೀಪ್ ಅವರ ಶ್ರಮವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುದೀಪ್ ಅವರ ಪೈಲ್ವಾನ್‌ಗಿರಿಗೆ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಬೆರಗಾಗಿದೆ.
