Television News
ಲಾಂಚನ ದುರುಪಯೋಗ: ಯಾವುದೇ ನೋಟಿಸ್ ಬಂದಿಲ್ಲ ಎಂದ ಹೊರಟ್ಟಿ

ಧಾರವಾಡ: ಪುಸ್ತಕದ ಮುಖಪುಟದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದುರಪಯೋಗ ವಿಚಾರ ಕುರಿತು ನನಗೆ ಯಾವುದು ನೋಟಿಸ್ ಬಂದಿಲ್ಲ ಎಂದು ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದುರಪಯೋಗ ಮಾಡಿದ್ದಾರೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿತು. ಈ ಕುರಿತು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ. ನನಗೆ ಯಾವುದು ನೋಟಿಸ್ ಬಂದಿಲ್ಲ.ಕಾನೂನು ಪ್ರಕಾರ ಏನಾಗುತ್ತೆ ನೋಡೋಣ ಎಂದು ಹೇಳಿದರು.
“42 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ನಾನು ಮಾಡಿದ ಸೇವೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಾನು ಮಾಡಿದ ಹೋರಾಟಗಳ ಕುರಿತು ನನ್ನ ಪ್ರತಿಸ್ಪರ್ಧಿಗಳು ಇಚ್ಚಿಸಿದರೇ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ,” ಎಂದು ಬಹಿರಂಗ ಸವಾಲು ಹಾಕಿದರು.

Continue Reading