Television News
ನನಗೂ ನರೇಶ್ ಗೂ ಡಿವೋರ್ಸ್ ಆಗಿಲ್ಲ, ಈಗ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ: ರಮ್ಯಾ ರಘುಪತಿ

ಕಳೆದ ಕೆಲ ದಿನಗಳಿಂದ ನರೇಶ್ ಹಾಗೂ ಪವಿತ್ರ ಲೋಕೇಶ್ ಕುರಿತಾಗಿ ಸಾಕಷ್ಟು ಸುದ್ದಿಗಳು ಕೇಳಿ ಬರ್ತಿದೆ. ಈಗಾಗಲೇ ಮೂರು ಮದುವೆಯಾಗಿರೋ ನರೇಶ್ ನಾಲ್ಕನೇಯ ಮದುವೆಗೆ ತಯಾರಿ ನಡೆಸಿದ್ದು ಸದ್ಯದಲ್ಲೇ ಪವಿತ್ರ ಲೋಕೇಶ್ ಜೊತೆ ಹಸೆ ಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಆದರೆ ಈ ಬಗ್ಗೆ ನರೇಶ್ ಆಗಲಿ ಪವಿತ್ರ ಲೋಕೇಶ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ನರೇಶ್ ಮೂರನೇ ಪತ್ನಿ ರಮ್ಯಾ ರಘಪತಿ ಪತಿ ನರೇಶ್ ಬಗ್ಗೆ ಮಾತನಾಡಿದ್ದಾರೆ.
ನರೇಶ್ ತಮ್ಮ ಮೂರನೇ ರಮ್ಯಾ ರಘುಪತಿ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ರಮ್ಯಾ ಅಲ್ಲಗಳೆದಿದ್ದಾರೆ. ನನ್ನಿಂದ ನರೇಶ್ ದೂರ ಹೋಗಿದ್ದಾರೆ ನಿಜ. ಆದರೆ ಕಾನೂನಾತ್ಮಕವಾಗಿ ನಮ್ಮ ನಡುವೆ ಪತಿ-ಪತ್ನಿ ಸಂಬಂಧ ಇದೆ. ಈಗ ಅವರು ಡಿವೋರ್ಸ್ ಲೆಟರ್ ಕಳುಹಿಸಿದ್ದಾರೆ. ಇದಕ್ಕೆ ನಾನು ಕಾನೂನಾತ್ಮಕವಾಗಿ ಉತ್ತರಿಸಬೇಕು ಎಂದು ರಮ್ಯಾ ಮಾಹಿತಿ ನೀಡಿದ್ದಾರೆ.

Continue Reading