Cinema News
4 ಭಾಷೆಗಳಲ್ಲಿ ಡಬ್ಬಿಂಗ್ ಮಾಡಿ ಹೊಸ ಮೈಲಿಗಲ್ಲು ಸೃಷ್ಟಿಸಿದ ‘ಪೈಲ್ವಾನ್’ ಕಿಚ್ಚ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗವಲ್ಲದೆ ತೆಲುಗು, ಹಿಂದಿ, ತಮಿಳು ಭಾಷೆಯ ಚಿತ್ರರಂಗಗಳಲ್ಲೂ ಹೆಸರು ಮಾಡಿದವರು.
ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೂಲಕ ಅಭಿನಯ ಚಕ್ರವರ್ತಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಬಹುತೇಕ ನಟರು ತಮ್ಮ ಮತೃಭಾಷೆಯ ಸಿನಿಮಾ ಹೊರೆತು ಪಡಿಸಿ ಅನ್ಯ ಭಾಷೆ ಸಿನಿಮಾಗಳಿಗೆ ತಮ್ಮ ಧ್ವನಿ ನೀಡುವುದಿಲ್ಲ. ಪೈಲ್ವಾನ್ ಚಿತ್ರದ ವಿಷ್ಯದಲ್ಲಿ ನಟ ಕಿಚ್ಚ ಸುದೀಪ ಅವರು 4 ಭಾಷೆಗಳಲ್ಲೂ ( ಕನ್ನಡ, ಹಿಂದಿ, ತಮಿಳು, ತೆಲುಗು) ಅವರೇ ಡಬ್ ಮಾಡಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಈ ಬಗ್ಗೆ ಕಿಚ್ಚ ಸುದೀಪ್ ಅವರು ಇತ್ತೀಚಿಗೆ ನಡೆದ ಪೈಲ್ವಾನ್ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ‘ಮಲಯಾಳಂ’ ಮಾತನಾಡುವುದಕ್ಕೆ ಮನೆಯಲ್ಲಿಯೇ ನಾಲಿಗೆ ತಿರುಗುವುದಿಲ್ಲ. ಹಾಗಾಗಿ, ಆ ಪ್ರಯತ್ನ ಮಾಡಲಿಲ್ಲ. ಅದೊಂದನ್ನು ಬಿಟ್ಟು, ತೆಲುಗು, ತಮಿಳು, ಹಿಂದಿಯಲ್ಲಿ ನಾನೇ ಡಬ್ಬಿಂಗ್ ಮಾಡಿದ್ದೇನೆ. ಅದು ತುಂಬ ಚೆನ್ನಾಗಿ ಮೂಡಿಬಂದಿದೆ. ಡಬ್ಬಿಂಗ್ ಮಾಡುವುದಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ಅನುಭವಿಗಳನ್ನೇ ಜತೆಯಲ್ಲಿಟ್ಟುಕೊಂಡು ಧ್ವನಿ ನೀಡಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಕಿಚ್ಚ ಸುದೀಪ್.
ನಮಗೆಲ್ಲ ತಿಳಿದಿರೋ ಹಾಗೆ ಪೈಲ್ವಾನ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣುತ್ತಿರುವುದೊ ಕೂಡ ಈಗ ಜಗಜ್ಜಾಹೀರಾಗಿದೆ. ಪೈಲ್ವಾನ್ ಚಿತ್ರ ಆಗಸ್ಟ್ ಅಂತ್ಯಕ್ಕೆ ತೆರೆಕಾಣುವ ಸಾಧ್ಯತೆ ಇದೆ.
