Cinema News
ಕಿಚ್ಚನ ಜೊತೆ ಸಮಂತಾ; ಮತ್ತೆ ಒಂದಾಗಲಿದೆಯಾ ಈಗ ಜೋಡಿ?

ಸುಮಾರು ವರ್ಷಗಳ ಹಿಂದೆ ಸುದೀಪ್ – ಸಮಂತಾ ಒಟ್ಟಿಗೆ ನಟಿಸಿದ್ದ “ಈಗ” ಚಿತ್ರ ದೇಶದಾದ್ಯಂತ ಸದ್ದು ಮಾಡಿತ್ತು. ಈಗ ಅದೇ ಜೋಡಿ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿರುವ “ಫ್ಯಾಂಟಮ್” ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತಿಯ ನಟಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ಬರುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಇದಾವುದನ್ನು ಚಿತ್ರತಂಡ ಕನ್ಫರ್ಮ್ ಮಾಡಿಲ್ಲ. ಆದರೆ ಸುದ್ದಿಗಳು ಮಾತ್ರ ಜೋರಾಗಿ ಹಬ್ಬಿದೆ.
ಅನೂಪ್ ಭಂಡಾರಿ ನಿರ್ದೇಶನದ ಹೊಸ ಚಿತ್ರ ಫ್ಯಾಂಟಮ್ ನಲ್ಲಿ ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾಂತೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ 2020ಕ್ಕೆ ಸೆಟ್ಟೇರಲಿದೆ. ಇದೊದು ಹೈ ಬಜೆಟ್ ಮೂವಿಯಾಗಿದ್ದು, ಇದರಲ್ಲಿ ನಿರೂಪ್ ಅವರು ಸಹ ಉತ್ತಮ ಪಾತ್ರದಲ್ಲಿರಲಿದ್ದಾರಂತೆ.

ಒಟ್ಟಿನಲ್ಲಿ ಸೆಟ್ಟೇರಕ್ಕೂ ಮುನ್ನವೇ ಸುದೀಪ್ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ.

Continue Reading