Connect with us

Cinema News

‘ಕೇಕೆ’ ಚಿತ್ರದ ‘ಗುಂಟೂರು ಅಮ್ಮಾಯಿ’ ಹಾಡು ಬಿಡುಗಡೆ; ಸೋನು ಶ್ರೀನಿವಾಸ್ ಗೌಡ ಐಟಂ ನಂಬರ್‌ಗೆ ಭರ್ಜರಿ ಮೆಚ್ಚುಗೆ

Published

on

ಬೆಂಗಳೂರು: ನಿರ್ದೇಶಕ ಸೋಮಶೇಖರ್ ಜಿ.ಕೆ. ಅವರ ನಿರ್ದೇಶನದ ‘ಕೇಕೆ’ ಚಿತ್ರದ ವಿಶೇಷ ಹಾಡು ‘ಗುಂಟೂರು ಅಮ್ಮಾಯಿ’ ಅನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಬಿಡುಗಡೆ ಮಾಡಲಾಯಿತು. ಬಹುತೇಕ ಹೊಸ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರವನ್ನು ರಮಾಲಿ ನಾಯ್ಕ್ ಹಾಗೂ ಕಲ್ಯಾಣ್ ನಿರ್ಮಿಸುತ್ತಿದ್ದು, ಛಾಯಾಗ್ರಹಣವನ್ನು ಭರತ್ ಇಂಡಿಯಾ ನಿರ್ವಹಿಸಿದ್ದಾರೆ. ಚಿತ್ರದ ಸಂಗೀತವನ್ನು ‘ಉಪೇಂದ್ರ ಐ ಲವ್ ಯೂ’ ಖ್ಯಾತಿಯ ಕಿರಣ್ ತೋಟಂಬೈಲ್ ನೀಡಿದ್ದಾರೆ.

ಹೊಸದಾಗಿ ಬಿಡುಗಡೆಯಾದ ‘ಗುಂಟೂರು ಅಮ್ಮಾಯಿ’ ಹಾಡಿಗೆ ಕಿರಣ್ ತೋಟಂಬೈಲ್ ಅವರೇ ಸಾಹಿತ್ಯ ಬರೆದಿದ್ದು, ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಆಲಾಪಾನ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಕನ್ನಡ-ತೆಲುಗು ಮಿಶ್ರಿತ ಸಾಹಿತ್ಯ ಹಾಗೂ ಮಾಸ್ ಬೀಟ್‌ಗಳಿಂದ ಕೂಡಿರುವ ಈ ಹಾಡಿಗೆ ಸೋಷಿಯಲ್ ಮೀಡಿಯಾ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಹೆಜ್ಜೆ ಹಾಕಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಹಾಡಿನ ಬಿಡುಗಡೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕನ್ನಡ ಸಿನಿಮಾದ ಹಾಡಿನಲ್ಲಿ ತೆಲುಗು ಪದಗಳ ಬಳಕೆ ಕುರಿತು ಕೆಲ ಪತ್ರಕರ್ತರು ಪ್ರಶ್ನೆ ಎತ್ತಿದರು. ಈ ಕುರಿತು ಕೆಲಕಾಲ ಚರ್ಚೆ ನಡೆದಿದ್ದು, ಸಾಧ್ಯವಾದಷ್ಟು ತಿದ್ದುಪಡಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸ್ಪಷ್ಟನೆ ನೀಡಿದರು. ಇದೇ ವೇಳೆ, ಸಿನಿಮಾದಲ್ಲಿ ಮೊದಲ ಬಾರಿಗೆ ನೃತ್ಯ ಮಾಡಿದ ಅನುಭವವನ್ನು ಹಂಚಿಕೊಂಡ ಸೋನು ಶ್ರೀನಿವಾಸ್ ಗೌಡ, ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ, ಪ್ರೇಕ್ಷಕರ ಬೆಂಬಲ ಕೋರಿದರು.

ವಿಶೇಷವೆಂದರೆ, ಹಾಡಿನ ಬಿಡುಗಡೆ ಸಮಾರಂಭದಲ್ಲೇ ಸೋನು ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬವನ್ನೂ ಚಿತ್ರತಂಡ ಸಂಭ್ರಮದಿಂದ ಆಚರಿಸಿತು. ‘ಕೇಕೆ’ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸೇರಿದಂತೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ನಿರ್ಮಾಪಕರು ಹಾಗೂ ಚಿತ್ರತಂಡ ತಿಳಿಸಿತು.

Spread the love

Continue Reading