Cinema News
ಇನ್‌ಸ್ಪೆಕ್ಟರ್ ವಿಕ್ರಮ್‌ನ ಹಾಡು ಇಂದು ಬಿಡುಗಡೆ

ಪ್ರಜ್ವಲ್ ದೇವರಾಜ್ ನಟನೆಯ ಇನ್‌ಸ್ಪೆಕ್ಟರ್ ವಿಕ್ರಮ್ ಸಿನಿಮಾದ ಹಾಡೊಂದು ಡಿ. 20ಕ್ಕೆ ರಿಲೀಸ್ ಆಗಲಿದೆ.
ಈ ಸಿನಿಮಾದ ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ…. ಹಾಡು ರಿಲೀಸ್ ಆಗಲಿದ್ದು, ಅದನ್ನು ಸೋನುನಿಗಂ ಹಾಡಿದ್ದಾರೆ. ವಿಕ್ರಂಗೆ ಸಂಗೀತ ನೀಡಿರುವುದು ಅನೂಪ್ ಸೀಳಿನ್. ಇದು ಅನೂಪ್ ಸೀಳಿನ್ ಮತ್ತು ಸೋನು ನಿಗಂ ಅವರ ಮೊದಲ ಕಾಂಬಿನೇಶನ್ ಹಾಡು. ಕಿರಿಕ್ ಪಾರ್ಟಿಗೆ ಹಾಡು ಬರೆದಿದ್ದ ಧನಂಜಯ್ ರಂಜನ್ ಈ ಹಾಡನ್ನು ಬರೆದಿದ್ದು, ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುತ್ತಿದೆ ಚಿತ್ರತಂಡ.
ಇದೊಂದು ಮಾಂಟೇಜ್ ಸಾಂಗ್ ಆಗಿದ್ದು, ಈ ಹಾಡಿನಲ್ಲಿ ಡಾನ್ಸ್ ಜತೆಗೆ ಫೈಟ್ ಕೂಡಾ ಬರುತ್ತದಂತೆ. ಮಾಧುರ್ಯ ತುಂಬಿದ ಈ ಹಾಡು ಮೆಲೋಡಿ ಲೋಕದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂಬುದು ಸಂಗೀತ ನಿರ್ದೇಶಕರ ಅಭಿಪ್ರಾಯವಾಗಿದೆ.
ನರಸಿಂಹ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ರಘುಮುಖರ್ಜಿ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಪ್ರಜ್ವಲ್‌ಗೆ ಮೊದಲ ಬಾರಿಗೆ ಭಾವನಾ ಮೆನನ್ ನಾಯಕಿಯಾಗಿದ್ದಾರೆ.
