Connect with us

Cinema News

‘ಲವ್ ಕಾಕ್ಟೇಲ್’ ಮೂಲಕ ಪ್ಲೇಬಾಯ್ ಅವತಾರದಲ್ಲಿ ಹರೀಶ್ ರಾಜ್

Published

on

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ನಟನಾಗಿ ಗುರುತಿಸಿಕೊಂಡಿರುವ ಹರೀಶ್ ರಾಜ್ ಇದೀಗ ‘ಲವ್ ಕಾಕ್ಟೇಲ್’ ಚಿತ್ರದ ಮೂಲಕ ಹೊಸ ಶೈಲಿಯ ರೊಮ್ಯಾಂಟಿಕ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದುವರೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಈ ಬಾರಿ ಪ್ಲೇಬಾಯ್ ಲುಕ್‌ನಲ್ಲಿ ಹೊಸ ಇಮೇಜ್‌ನೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಹಾಡುಗಳ ಜೊತೆಗೆ ಹರೀಶ್ ರಾಜ್ ಅವರ ಹೊಸ ಪರದೆ ವ್ಯಕ್ತಿತ್ವವೂ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನವನ್ನೂ ಹರೀಶ್ ರಾಜ್ ಅವರೇ ವಹಿಸಿಕೊಂಡಿದ್ದಾರೆ. ಪ್ರೇಮದಲ್ಲಿ ಸೋತರೂ ಜೀವನವನ್ನು ಸಂತೋಷವಾಗಿ ಬದುಕಬಹುದು ಎಂಬ ಸಂದೇಶವನ್ನು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ತಮ್ಮ 30 ವರ್ಷದ ಸಿನಿ ಪಯಣ ಮತ್ತು 50ನೇ ವಯಸ್ಸಿನ ಸಂಭ್ರಮವನ್ನು ಈ ಚಿತ್ರದ ಮೂಲಕ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ ಎಂದು ಅವರು ಹೇಳಿದರು. ಆರಂಭದಲ್ಲಿ ಚಿತ್ರಕ್ಕೆ ‘ವೆಂಕಟೇಶಾಯ ನಮಃ’ ಎಂಬ ಶೀರ್ಷಿಕೆ ಯೋಚಿಸಲಾಗಿತ್ತಾದರೂ, ಸೆನ್ಸಾರ್ ಮಂಡಳಿಯ ಸಲಹೆಯಂತೆ ನಂತರ ‘ಲವ್ ಕಾಕ್ಟೇಲ್’ ಎಂದು ಬದಲಾಯಿಸಲಾಯಿತು ಎಂದರು.

ನಿರ್ಮಾಪಕ ಪಿ. ಜನಾರ್ಧನ್ ಮಾತನಾಡಿ, ನಿರ್ಮಾಪಕರ ಜವಾಬ್ದಾರಿಯನ್ನು ಹೊರತುಪಡಿಸಿ ಉಳಿದ ಬಹುತೇಕ ಹೊಣೆಗಾರಿಕೆಯನ್ನು ಹರೀಶ್ ರಾಜ್ ಅವರೇ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಟಿ ಅಭಿನಯ ಕೂಡ ಹರೀಶ್ ರಾಜ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡು, ಅವರ ಶ್ರಮ ಹಾಗೂ ಉತ್ಸಾಹ ಸದಾ ಪ್ರೇರಣೆಯಾಗಿದ್ದು, ಈ ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ, ಜೀವನ್ ಪ್ರಕಾಶ್ ಸಂಕಲನ ಹಾಗೂ ರಾಜಾ ಶಿವಶಂಕರ್ ಛಾಯಾಗ್ರಹಣ ನೀಡಿದ್ದಾರೆ. ರಮಿತ್ ಏಲಕ್ಕಿ ಚಿತ್ರದ ಸಂಪರ್ಕ ಕಾರ್ಯ ನಿರ್ವಹಿಸಿದ್ದು, ಹರೀಶ್ ರಾಜ್ ಜೊತೆಗೆ ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Spread the love

Continue Reading