Connect with us

Cinema News

ಆಟೋ ಡ್ರೈವರ್ ಜೀವನದ ಕಥೆ ಹೇಳುವ ‘ದೊಡ್ಮನ್ಸ’ ಟೀಸರ್ ಬಿಡುಗಡೆ

Published

on

ಯುವ ಪ್ರತಿಭೆ ಶರತ್ ಕೃಷ್ಣ ಅವರ ಅಭಿನಯ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ‘ದೊಡ್ಮನ್ಸ’ ತೆರೆಗೆ ಬರಲು ಸಜ್ಜಾಗಿದೆ. ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಟೀಸರ್ ಬಿಡುಗಡೆಯಾದ ಬಳಿಕ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಬೆಂಗಳೂರು ನಗರದ ಆಟೋ ಡ್ರೈವರ್ ಒಬ್ಬನ ಜೀವನವನ್ನು ಆಧರಿಸಿಕೊಂಡಿರುವ ಈ ಚಿತ್ರ, ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ‘ದೊಡ್ಮನ್ಸ’ ಆಗುತ್ತಾನೆ ಎಂಬುದನ್ನು ಕಾಲ್ಪನಿಕ ಕಥಾಹಂದರದಲ್ಲಿ ತೋರಿಸುತ್ತದೆ. ಶರತ್ ಕೃಷ್ಣ ಸ್ವತಃ ನಾಯಕನಾಗಿ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರೇಷ್ಮಾ ಲಿಂಗರಾಜಪ್ಪ ನಾಯಕಿಯಾಗಿ ಅಭಿನಯಿಸಿದ್ದಾರೆ. ಹುಲಿ ಕಾರ್ತಿಕ್, ಬಲರಾಜವಾಡಿ, ಶಿಲ್ಪಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಶರತ್ ಕೃಷ್ಣ, ಸಾಮಾನ್ಯ ವ್ಯಕ್ತಿಯ ಜೀವನದಲ್ಲಿನ ಹೋರಾಟ ಮತ್ತು ಬೆಳವಣಿಗೆಗಳನ್ನು ಮಾಸ್ ಎಂಟರ್ಟೈನ್ಮೆಂಟ್ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದರು. ನಾಯಕಿ ರೇಷ್ಮಾ ಲಿಂಗರಾಜಪ್ಪ ಕೂಡ ತಮ್ಮ ಪಾತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇರುವುದಾಗಿ ಹೇಳಿ, ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಹುಲಿ ಕಾರ್ತಿಕ್, ನಿರ್ದೇಶಕ ಶರತ್ ಕೃಷ್ಣ ಅವರ ಪರಿಶ್ರಮವನ್ನು ಶ್ಲಾಘಿಸಿದರು. ‘ದೊಡ್ಮನ್ಸ’ ಚಿತ್ರದಲ್ಲಿ ಐದು ಹಾಡುಗಳಿದ್ದು, ಶ್ರೀಧರ ಕಶ್ಯಪ್ ಹಾಗೂ ಅಲೆಕ್ಸ್ ಸಂಗೀತ ನೀಡಿದ್ದಾರೆ. ಆನಂದ ಇಳಯರಾಜ ಅವರ ಛಾಯಾಗ್ರಹಣ, ವೇದಿಕ್ ಅವರ ಸಂಕಲನ ಚಿತ್ರಕ್ಕಿದೆ. ಬೆಂಗಳೂರು ಮತ್ತು ಅಹಮದಾಬಾದ್ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Spread the love

Continue Reading