Connect with us

News

ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ಧ್ರುವ ಸರ್ಜಾ ಅಭಿನಯದ ‘KD-ದಿ ಡೆವಿಲ್’

Published

on

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಪ್ರೇಮ್ ಅವರ ಬಹು ನಿರೀಕ್ಷಿತ ಸಿನಿಮಾ *‘KD-ದಿ ಡೆವಿಲ್’* ಇದೀಗ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಚಿತ್ರವು ಜೂನ್ 5ರಿಂದ *ZEE5 ಕನ್ನಡ*ದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ವೀಕ್ಷಣೆಗೆ ಲಭ್ಯವಾಗಲಿದೆ. ಥಿಯೇಟರ್‌ಗಳಲ್ಲಿ ಗಮನ ಸೆಳೆದ ಈ ಸಿನಿಮಾ ಈಗ ಒಟಿಟಿ ಮೂಲಕ ಮತ್ತಷ್ಟು ದೊಡ್ಡ ಪ್ರೇಕ್ಷಕವರ್ಗವನ್ನು ತಲುಪಲು ಸಿದ್ಧವಾಗಿದೆ.

ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಅದರ ಭಾರೀ ತಾರಾಬಳಗ. ಧ್ರುವ ಸರ್ಜಾ ಜೊತೆ ಬಾಲಿವುಡ್ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ ಹಾಗೂ ನೋರಾ ಫತೇಹಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ.

1970ರ ದಶಕದ ಹಿನ್ನೆಲೆಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಕುಟುಂಬದ ಬಾಂಧವ್ಯ, ಅಧಿಕಾರದ ಹೋರಾಟ ಹಾಗೂ ರಾಜಕೀಯ ಸಂಘರ್ಷಗಳನ್ನು ಪ್ರೇಮ್ ವಿಭಿನ್ನವಾಗಿ ತೆರೆ ಮೇಲೆ ತಂದಿದ್ದಾರೆ. ಅಣ್ಣನ ಮೇಲಿನ ಅಪಾರ ಪ್ರೀತಿ ಮತ್ತು ನಂಬಿಕೆಯಿಂದ ಬದುಕುವ ಕಾಳಿದಾಸ ಅಲಿಯಾಸ್ ಕೆಡಿ ಎಂಬ ವ್ಯಕ್ತಿಯ ಬದುಕಿನ ಸುತ್ತ ಕಥೆ ಸಾಗುತ್ತದೆ. ಆತನ ಪಯಣದಲ್ಲಿ ಎದುರಾಗುವ ಸವಾಲುಗಳು ಮತ್ತು ಸಂಬಂಧಗಳ ಗಾಢತೆಯನ್ನು ಸಿನಿಮಾ ಭಾವನಾತ್ಮಕವಾಗಿ ಕಟ್ಟಿಕೊಡುತ್ತದೆ.

ಧ್ರುವ ಸರ್ಜಾ ಅವರ ಶಕ್ತಿಶಾಲಿ ಪಾತ್ರದೊಂದಿಗೆ ಆಕ್ಷನ್ ಮತ್ತು ಎಮೋಷನ್‌ಗಳ ಸಮತೋಲನ ಚಿತ್ರಕ್ಕೆ ಪ್ರಮುಖ ಬಲವಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ ಪ್ರೇಮ್ ಅವರ ಮಾಸ್ ನಿರೂಪಣೆ ಸಿನಿಮಾಗೆ ವಿಭಿನ್ನ ಮೆರುಗು ನೀಡಿವೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘KD-ದಿ ಡೆವಿಲ್’ ಇದೀಗ ಒಟಿಟಿ ಪ್ರೇಕ್ಷಕರಿಗೂ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದೆ.

Spread the love

Continue Reading