Cinema News
ಮನುಷ್ಯನ ಮೂಳೆ ಜತೆ ಪುನೀತ್

ಪುನೀತ್‌ರಾಜ್‌ಕುಮಾರ್ ನಟನೆಯ ಯುವರತ್ನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಪುನೀತ್ ಮನುಷ್ಯನ ಮೂಳೆ ಜತೆ ಇರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದು ಆನ್‌ಲೈನ್‌ನಲ್ಲಿ ರಿಲೀಸ್ ಆದ ತಕ್ಷಣ ಯುವರತ್ನ ಸಿನಿಮಾದ ಕಂಟೆಂಟ್ ಏನಿರಬಹುದು ಎಂಬುದರ ಚರ್ಚೆ ಜೋರಾಯಿತು. ಕೆಲವರು ಈ ಲುಕ್‌ನ್ನು ಇಷ್ಟಪಟ್ಟೆರೆ ಕೆಲವರು ಡೊಂಟ್ ಲೈಕ್ ಎಂಬ ಮಾತುಗಳನ್ನಾಡಿದ್ದಾರೆ. ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಎಜುಕೇಶನ್ ಮಾಫಿಯಾ ಕಥೆ ಇದೆ ಎಂಬುದು ಈಗಾಗಲೇ ಗೊತ್ತಾಗಿದ್ದು, ಈಗ ರಿವೀಲ್ ಮಾಡಿರುವ ಲುಕ್ ಮೂಲಕ ಇದು ಯಾವ ರೀತಿಯ ಕಥೆ ಎಂದು ಮಾತನಾಡಿಕೊಳ್ಳುವಂತಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಪೋಸ್ಟರ್‌ನಲ್ಲಿ ರಗ್ಬಿ ಆಡುತ್ತಿರುವ ಭಂಗಿಯಲ್ಲಿ ಪುನೀತ್ ಪೋಸ್ ನೀಡಿದ್ದರು.
ಡಾಲಿ ಧನಂಜಯ, ಸೋನುಗೌಡ, ದಿಗಂತ್, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಜತೆಗೆ ರಾಜಕುಮಾರ ನಂತರ ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಒಂದಾಗಿದ್ದಾರೆ. ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಸ್ ಬ್ಯಾನರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
