Television News
ಮೊದಲ ರಾತ್ರಿಯ ಬಗ್ಗೆ ಮಾತನಾಡಿದ ಆಲಿಯಾ ಭಟ್: ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?

ಕರಣ್ ಜೋಹರ್ ನಡೆಸಿಕೊಡುವ ಖ್ಯಾತ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಸೀಸನ್ 7 ಆರಂಭವಾಗಲು ಇನ್ನು ಒಂದು ದಿನ ಮಾತ್ರವೇ ಭಾಕಿ ಇದೆ. ಈ ಬಾರಿ ನೇರವಾಗಿ ಕಾರ್ಯಕ್ರಮ ಒಟಿಟಿ ಮೂಲಕ ಪ್ರಸಾರವಾಗುತ್ತಿದೆ. ಮೊದಲ ಎಪಿಸೋಡ್ಗೆ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಆಗಮಿಸಲಿದ್ದಾರೆ.

ಇದರ ಪ್ರೋಮೋವನ್ನು ಕರಣ್ ಜೋಹರ್ ಹಂಚಿಕೊಂಡಿದ್ದಾರೆ. ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಜುಲೈ 7ರಂದು 7 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ‘ಗಲ್ಲಿ ಬಾಯ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಈಗ ಇಬ್ಬರೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಕರಣ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕಾರಣದಿಂದ ಮೊದಲ ಅತಿಥಿಯಾಗಿ ರಣವೀರ್ ಹಾಗೂ ಆಲಿಯಾ ಭಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಆಲಿಯಾ ಭಟ್ಗೆ ಕೆಲ ನೇರ ಪ್ರಶ್ನೆಗಳನ್ನು ಕೇಳಲಾಗಿದೆ.

‘ಮದುವೆ ನಂತರ ಅರ್ಥವಾದ ಒಂದು ವಿಚಾರ ಯಾವುದು ಹೇಳಿ’ ಎಂದು ಆಲಿಯಾಗೆ ಕರಣ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಆಲಿಯಾ ‘ಮೊದಲ ರಾತ್ರಿ ಎಂಬುದು ಇರುವುದಿಲ್ಲ. ನೀವು ಸುಸ್ತಾಗಿರುತ್ತೀರಿ’ ಎಂದಿದ್ದಾರೆ. ಆಲಿಯಾ ಭಟ್ ಉತ್ತರ ಕೇಳಿ ರಣವೀರ್ ಸಿಂಗ್ ಬಿದ್ದುಬಿದ್ದು ನಕ್ಕಿದ್ದಾರೆ.
ಕರಣ್ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಸಾಕಷ್ಟು ನೇರ ಪ್ರಶ್ನೆಗಳು ಎದುರಾಗುತ್ತವೆ. ಇದರಿಂದ ಹಲವು ವಿವಾದಗಳು ಹುಟ್ಟಿಕೊಂಡಿದ್ದೂ ಇದೆ.
