Connect with us

Cinema News

ಒಂದು ಶಿಕಾರಿಯ ಕಥೆ ಚಿತ್ರದ ನಿರ್ದೇಶಕರ ಹೊಸ ಸಿನಿಮಾ ‘ವಸಂತಕಾಲದ ಹೂಗಳು’

Published

on

ಪ್ರಮೋದ್ ಶೆಟ್ಟಿ ನಟನೆಯ ಸಚಿನ್ ಶೆಟ್ಟಿ ರಚಿಸಿ, ನಿರ್ದೇಶಿಸಿದ ಒಂದು ಶಿಕಾರಿಯ ಕಥೆ ಚಿತ್ರ 2020 ರಲ್ಲಿ ಬಿಡುಗಡೆಯಾಗಿ ತನ್ನ ಸಸ್ಪೆನ್ಸ್ ಕಥಾನಿರೂಪಣೆಯಿಂದ ಜನರ ಮನಗೆದ್ದಿತ್ತು. ಈ ಚಿತ್ರದ ನಿರ್ದೇಶಕರ ಮುಂದಿನ ಚಿತ್ರ ಅನೌನ್ಸ್ ಆಗಿದ್ದು, ಸಂಪೂರ್ಣವಾಗಿ ಬೇರೆಯದೇ ಜಾನರ್ ಗೆ ಹೊರಳಿರುವ ನಿರ್ದೇಶಕ ಸಚಿನ್ ಶೆಟ್ಟಿ ಈ ಬಾರಿ ಟೀನೇಜ್ ಲವ್ ಸ್ಟೋರಿಯೊಂದನ್ನು ಕ್ಲಾಸ್ ಸ್ಟೈಲ್ ನಲ್ಲಿ ನಿರೂಪಿಸಲು ಹೊರಟಿದ್ದಾರೆ.

ಚಿತ್ರದ ನಾಯಕ ಸಚಿನ್ ರಾಠೋಡ್, ನಾಯಕಿ ರಾಧಾ ಭಗವತಿ ಮತ್ತು ನಿರ್ಮಾಪಕರೆಲ್ಲರೂ ಬಿಜಾಪುರದವರಾಗಿದ್ದು, ಅದೇ ಜಿಲ್ಲೆಯ ಕನಮಡಿ ಎಂಬ ಗ್ರಾಮದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು, ಆ ಭಾಗದ ಕಥೆಗಳು ಮುನ್ನೆಲೆಗೆ ಬರಬೇಕು ಎಂಬ ಈಗಿನ ಕೂಗಿಗೆ ಈ ಚಿತ್ರ ಒಂದು ಸಣ್ಣ ಉತ್ತರವಾಗಬಹುದು. ಕರಾವಳಿಯ ನಿರ್ದೇಶಕರು ತಮ್ಮ ಕಥೆಯನ್ನು ಉತ್ತರ ಕರ್ನಾಟಕದ ಪರಿಸರದ ಹಿನ್ನೆಲೆಯ ಜೊತೆ ಹೇಳಲು ಹೊರಟಿರುವುದು ವಿಶೇಷವಾಗಿದೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು

ಮುಂದೆ ಚಿತ್ರದ ಒಂದೊಂದೇ ವಿವರಗಳನ್ನು ಬಿಡುಗಡೆ ಮಾಡಲಿದೆ.

ಚಿತ್ರ : ವಸಂತಕಾಲದ ಹೂಗಳು
ರಚನೆ, ನಿರ್ದೇಶನ : ಸಚಿನ್ ಶೆಟ್ಟಿ
ಪಾತ್ರಧಾರಿಗಳು : ಸಚಿನ್ ರಾಠೋಡ್, ರಾಧಾ ಭಗವತಿ, ರಮೇಶ್ ರೈ, ಗುರುರಾಜ್ ಶೆಟ್ಟಿ, ಪವನ್, ನಂದೀಶ್
ನಿರ್ಮಾಪಕರು : ಅಶೋಕ್ ರಾಠೋಡ್, ಸಿದ್ದು ರಾಸುರೆ
ಛಾಯಾಗ್ರಹಣ : ಶಿವಶಂಕರ ನೂರಂಬಡ
ಸಂಕಲನ : ಬಿ.ಎಸ್ ಕೆಂಪರಾಜು
ಸಂಗೀತ : ಭರತ್ ಜನಾರ್ಧನ್

Spread the love

Continue Reading
Click to comment

Leave a Reply

Your email address will not be published. Required fields are marked *