Cinema News
ವಿಮಾನ ಸಿಬ್ಬಂದಿಯ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ ಪೂಜಾ ಹೆಗ್ಡೆ: ಕ್ಷಮೆ ಕೇಳಿದ ಸಂಸ್ಥೆ

ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಬಾಲಿವುಡ್ ಚಿತ್ರರಂಗದಲ್ಲೂ ಸಾಕಷ್ಟು ಬೇಡಿಕೆ ಇರಿಸಿಕೊಂಡಿದ್ದಾರೆ. ಇತ್ತೀಚೆಗೆ ಪೂಜಾ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ರು ಆಕೆಗಿರೋ ಬೇಡಿಕೆ ಮಾತ್ರವೂ ಕೊಂಚವು ಕಮ್ಮಿಯಾಗಿಲ್ಲ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿರೋ ಪೂಜಾ ಹೆಗ್ಡೆ ಇದೀಗ ಸಿನಿಮೇತರ ವಿಷಯದಿಂದಾಗಿ ಸುದ್ದಿಯಾಗಿದ್ದಾರೆ.
ಪೂಜಾ ಹೆಗ್ಡೆ ತಮ್ಮ ಟ್ವಿಟರ್ ಖಾತೆಯಲ್ಲಿ ಏರ್ ಇಂಡಿಯೋ ವಿಮಾನ ಸಂಸ್ಥೆಯ ಸಿಬ್ಬಂದಿಯೊಬ್ಬರ ಬಗ್ಗೆ ದೂರಿದ್ದಾರೆ. ಮುಂಬೈನಿಂದ ಹೊರಟ ಏರ್ ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ವಿಪುಲ್ ನಕಾಶೆ ಎಂಬಾತ ತಮ್ಮ ಜೊತೆಗೆ ತೀರಾ ದರ್ಪದಿಂದ ವರ್ತಿಸಿದ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ನಾನು ಯಾವತ್ತು ಇಂತಹ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವುದಿಲ್ಲ. ಆದರೆ ಈತ ವಿನಾಕಾರಣ ನಮ್ಮ ಜೊತೆ ದರ್ಪದಿಂದ, ತಿರಸ್ಕಾರದಿಂದ ಹಾಗೂ ಬೆದರಿಕೆ ಹಾಕುವ ರೀತಿ ವರ್ತನೆ ಮಾಡಿದ್ದಾನೆ. ಇದು ತೀರಾ ಎನಿಸಿದ ಕಾರಣಕ್ಕೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಬೇಕಾಗಿದೆ ಎಂದು ಪೂಜಾ ಟ್ವೀಟ್ ಮಾಡಿದ್ದಾರೆ.
ಪೂಜಾ ಟ್ವೀಟ್ ಗೆ ತಕ್ಷಣ ಪ್ರತಿಕ್ರಿಯಿಸಿದ ಏರ್ ಇಂಡಿಗೋ ಸಂಸ್ಥೆ ನಿಮಗೆ ಆದ ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇನೆ. ನಿಮ್ಮೊಂದಿಗೆ ನಾವು ಶೀಘ್ರವೇ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ. ಪಿಎನ್ ಆರ್ ಸಂಖ್ಯೆ ಹಾಗೂ ನಿಮ್ಮ ದೂರವಾಣಿ ಸಂಖ್ಯೆಯನ್ನು ಕಳುಹಿಸಿ ಎಂದು ಇಂಡಿಗೋ ಸಂಸ್ಥೆ ಪೂಜಾ ಹೆಗ್ಡೆ ಟ್ವೀಟ್ ಗೆ ಉತ್ತರಿಸಿದೆ.
