Cinema News
ಜಯಲಲಿತಾ ಬಯೋಪಿಕ್‌ನಲ್ಲಿ ಪ್ರಿಯಾಮಣಿ

ಕನ್ನಡದ ಬಹುಭಾಷಾ ನಟಿ ಪ್ರಿಯಾಮಣಿ ಜಯಲಲಿತಾ ಬಯೋಪಿಕ್‌ನಲ್ಲಿ ಶಶಿಕಲಾ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಎ ವಿಜಯ್ ನಿರ್ದೇಶನ ಮಾಡುತ್ತಿರುವ ತಲೈವಿ ಸಿನಿಮಾದಲ್ಲಿ ಅವರು ಶಶಿಕಲಾ ಪಾತ್ರದಲ್ಲಿ ಇರಲಿದ್ದಾರಂತೆ. ಆದರೆ ಈ ಬಗ್ಗೆ ಪ್ರಿಯಾಮಣಿ ಏನು ಹೇಳಿಲ್ಲ. ಸದ್ಯಕ್ಕೆ ಎಲ್ಲವೂ ಫೈನಲ್ ಆದ ನಂತರ ಮಾಧ್ಯಮಗಳಿಗೆ ನಾನೇ ತಿಳಿಸುತ್ತೇನೆ ಎಂದಿದ್ದಾರೆ.
ಆದರೆ ತಲೈವಿ ಸಿನಿಮಾದಲ್ಲಿ ಶಶಿಕಲಾ ಪಾತ್ರ ಸಿಕ್ಕಾಪಟ್ಟೆ ಪವರ್‌ಫುಲ್ ಆಗಿದ್ದು, ಅದಕ್ಕಾಗಿ ಪ್ರಿಯಾ ಮಣಿ ಅವರನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ.
ಪ್ರಿಯಾಮಣಿ ತಮ್ಮ ನಟನೆಗಾಗಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಈ ಪಾತ್ರಕ್ಕೆ ಅವರೇ ಸೂಟಬಲ್ ಎಂದು ದಕ್ಷಿಣ ಭಾಗದ ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ. ಇನ್ನು ತಲೈವಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು, ಆಗ ಇದಕ್ಕೆ ಒಂದಷ್ಟು ನೆಗೆಟಿವ್ ಕಮೆಂಟ್ ಸಹ ಸಿಕ್ಕಿತ್ತು. ತಲೈವಿಯಾಗಿ ಕಂಗನಾ ರಣಾವತ್ ನಟಿಸುತ್ತಿರುವುದು ಬಹಳ ವಿಶೇಷವಾಗಿದೆ.

Continue Reading