Connect with us

Cinema News

ಪ್ರಿಯಾಂಕಾ ಉಪೇಂದ್ರ ಅಭಿನಯದ “ಸೆಪ್ಟೆಂಬರ್ 21” ಮೇ 22ಕ್ಕೆ ಬಿಡುಗಡೆ

Published

on

ಪ್ರಿಯಾಂಕಾ ಉಪೇಂದ್ರ ಅಭಿನಯದ ಹಾಗೂ ಯುವ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶಿಸಿರುವ “ಸೆಪ್ಟೆಂಬರ್ 21” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರ ಮೇ 22ರಂದು ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ, “ಸೆಪ್ಟೆಂಬರ್ 21” ಆಲ್ಝೈಮರ್ ಖಾಯಿಲೆ ಸುತ್ತ ಸಾಗುವ ಕಥೆಯಾಗಿದೆ ಎಂದರು. “ರೋಗಿಗಿಂತ ಅವನನ್ನು ನೋಡಿಕೊಳ್ಳುವವರ ನಿರ್ಧಾರವೇ ಮುಖ್ಯ” ಎಂಬ ಅಡಿಬರಹದೊಂದಿಗೆ ಸಿನಿಮಾ ಮೂಡಿಬಂದಿದೆ ಎಂದು ತಿಳಿಸಿದರು. ಮೇ 15ರಂದು ಖ್ಯಾತ ಕಾನ್ಸ್ ಫಿಲಂ ಫೆಸ್ಟಿವಲ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನ ನಡೆಯಲಿದ್ದು, ತಮ್ಮ ಮೊದಲ ನಿರ್ದೇಶನದ ಚಿತ್ರ ಅಂತರರಾಷ್ಟ್ರೀಯ ವೇದಿಕೆಗೆ ಹೋಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ನಿರ್ದೇಶಕಿ ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯಿತೆಂದು ಹೇಳಿದರು. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಲ್ಝೈಮರ್ ರೋಗಿಯ ಆರೈಕೆ ಮಾಡುವ ಮಹಿಳೆಯ ಪಾತ್ರ ನಿರ್ವಹಿಸಿರುವುದಾಗಿ ತಿಳಿಸಿದರು. ತಮ್ಮ ಕುಟುಂಬದಲ್ಲಿಯೂ ಈ ಕಾಯಿಲೆಯಿಂದ ಬಳಲಿದವರನ್ನು ಹತ್ತಿರದಿಂದ ನೋಡಿರುವ ಅನುಭವ ಇರುವುದರಿಂದ ಪಾತ್ರದೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದೇನೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ನೀಡಿದ ಉಪೇಂದ್ರ ಹಾಗೂ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಹೇಳಿದರು.

ಚಿತ್ರದಲ್ಲಿ ಆಲ್ಝೈಮರ್ ರೋಗಿಯ ಪಾತ್ರದಲ್ಲಿ ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಅಭಿನಯಿಸಿದ್ದಾರೆ. ಕಥೆಗಾರ ರಾಜಶೇಖರ್ ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ಹಂಚಿಕೊಂಡರೆ, ಸಂಗೀತ ನಿರ್ದೇಶಕ ವಿನಯ್ ಚಂದ್ರ ಹಾಡುಗಳ ಕುರಿತು ಮಾತನಾಡಿದರು. ನಿರ್ಮಾಪಕರಾದ ವಿಜಯ್ ಚೌಧರಿ, ಶ್ರೀನಿವಾಸ್ ಬೆಟ್ಟದಪುರ, ರಮೇಶ್ ಭಂಡಾರಿ, ಅಭಿಷೇಕ್ ಗೌತಮ್ ಹಾಗೂ ಅಜಿತ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Spread the love

Continue Reading