Cinema News
ಹೊಂಬಾಳೆಯಿಂದ ಮತ್ತೊಂದು ಪೌರಾಣಿಕ ಅದ್ಧೂರಿ ಸಿನಿಮಾ ‘ಮಹಾವತಾರ ಪರಶುರಾಮ’

ಪರಶುರಾಮ ಜಯಂತಿಯ ವಿಶೇಷ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ತನ್ನ ಹೊಸ ಮಹತ್ವಾಕಾಂಕ್ಷೆಯ ಚಿತ್ರ ‘ಮಹಾವತಾರ ಪರಶುರಾಮ’ ಅನ್ನು ಅಧಿಕೃತವಾಗಿ ಘೋಷಿಸಿದೆ. ಭಾರತೀಯ ಸಿನಿ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿರುವ ಸಂಸ್ಥೆ, ಈ ಘೋಷಣೆಯಿಂದ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದೆ.
‘ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಹಾಗೂ ‘ಮಹಾವತಾರ ನರಸಿಂಹ’ದಂತಹ ಯಶಸ್ವಿ ಚಿತ್ರಗಳ ನಂತರ, ಇದೀಗ ನಿರ್ದೇಶಕ ಅಶ್ವಿನ್ ಕುಮಾರ್ ಅವರ ಕೈಚಳಕದಲ್ಲಿ ಈ ಪೌರಾಣಿಕ ಕಥೆ ತೆರೆಗೆ ಬರುತ್ತಿದೆ. ಕ್ಲೀಂ ಪ್ರೊಡಕ್ಷನ್ಸ್ ಸಹಭಾಗಿತ್ವದೊಂದಿಗೆ ನಿರ್ಮಾಣವಾಗುತ್ತಿರುವ ಈ ಸಿನಿಮಾ, ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ ‘ಮಹಾವತಾರ ಸಿನಿಮಾಟಿಕ್ ಯುನಿವರ್ಸ್’ನ ಪ್ರಮುಖ ಭಾಗವಾಗಿದೆ.

ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನ ಬಳಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶ ಹೊಂದಿರುವ ಈ ಸಿನಿಮಾ ಈಗಾಗಲೇ ಭಾರೀ ಕುತೂಹಲ ಹುಟ್ಟಿಸಿದೆ. ಈ ಘೋಷಣೆ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಯಶಸ್ಸಿಗೆ ದಾರಿ ಮಾಡಿಕೊಡುವ ಸೂಚನೆ ನೀಡುತ್ತಿದೆ.
