Connect with us

Cinema News

ಏಪ್ರಿಲ್ 10ರಂದು ಪ್ರೇಕ್ಷಕರ ಮುಂದೆ ಜಯರಾಮ್ ಕಾರ್ತಿಕ್ ಅಭಿನಯದ “ಕಾಡ”

Published

on

ಏಪ್ರಿಲ್ 10 ರಂದು ಜಯರಾಮ್ ಕಾರ್ತಿಕ್ (ಜೆ.ಕೆ) ಅಭಿನಯದ “ಕಾಡ” ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಿರಿತೆರೆ ಹಾಗೂ ಕಿರುತೆರಗಳಲ್ಲಿ ಗುರುತಿಸಿಕೊಂಡಿರುವ ಜೆ.ಕೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತ್ ಕುಮಾರ್ ಸಕ್ಸೇನ ನಿರ್ಮಾಣದಲ್ಲಿ, ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್ ನಿರ್ದೇಶಿಸಿರುವ ಈ ಸಿನಿಮಾ ಸೈಕೋ ಥ್ರಿಲ್ಲರ್ ಜಾನರ್‌ನದು. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿತು.

ನಿರ್ದೇಶಕ ವಿಶೃತ್ ನಾಯಕ್ ಮಾತನಾಡಿ, “ಇದು ನನ್ನ ಮೂರನೇ ಸಿನಿಮಾ. ಸೈಕೋಪಾತ್‌ಗಳ ಮನಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಕಥೆ ರೂಪಿಸಲಾಗಿದೆ. ಕೆಲವರು ಹುಟ್ಟುತ್ತಲೇ ಸೈಕೋ ಆಗಿರುತ್ತಾರೆ ಎಂಬ ವಿಚಾರದ ಮೇಲೆ ಅಧ್ಯಯನ ಮಾಡಿ ಕಥೆ ಬರೆದಿದ್ದೇನೆ. ಎರಡು ಕಥೆಗಳಾಗಿ ಆರಂಭವಾಗಿ ಒಂದೇ ಕಥೆಯಾಗಿ ಬೆಸೆದುಕೊಳ್ಳುತ್ತದೆ. ಜೆ.ಕೆ ಅವರು ವಿಭಿನ್ನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ, ಅಚ್ಯುತಕುಮಾರ್, ಉಗ್ರಂ ಮಂಜು ಹಾಗೂ ಶ್ರೀರಾಮ್ ಅವರ ಅಭಿನಯವೂ ಗಮನ ಸೆಳೆಯುತ್ತದೆ” ಎಂದರು.

ಚಿತ್ರದ ಸಂಗೀತವನ್ನು ಸತೀಶ್ ಬಾಬು ನೀಡಿದ್ದಾರೆ. ಅರುಣ್ ಸುರೇಶ್ ಅವರ ಛಾಯಾಗ್ರಹಣ, ವಿಕಾಸ್ ಚಂದ್ರ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ. ಸಾಹಸ ನಿರ್ದೇಶನವನ್ನು ನಿರ್ದೇಶಕ ವಿಶೃತ್ ನಾಯಕ್ ಹಾಗೂ ರಮೇಶ್ ಮಾಡಿದ್ದಾರೆ. ನಿರ್ಮಾಪಕ ಅಮಿತ್ ಕುಮಾರ್ ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರು.

ನಾಯಕ ಜಯರಾಮ್ ಕಾರ್ತಿಕ್ ಮಾತನಾಡಿ, “ನನ್ನ ಮೇಲೆ ನೀವು ತೋರಿಸಿರುವ ಪ್ರೀತಿಗೆ ನಾನು ಋಣಿ. ಕಥೆ ಕೇಳಿದ ಕ್ಷಣವೇ ಇಷ್ಟವಾಯಿತು. ಇದು ನಾನು ಮಾಡಿರದ ವಿಭಿನ್ನ ಪಾತ್ರ. ಸಕಲೇಶಪುರದಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರ ಮತ್ತು ನನ್ನ ಪಾತ್ರ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಕಲನಕಾರ ವಿಕಾಸ್ ಚಂದ್ರ ಮತ್ತು ನಟ ಶ್ರೀರಾಮ್ ಉಪಸ್ಥಿತರಿದ್ದರು.

Spread the love

Continue Reading
Click to comment

Leave a Reply

Your email address will not be published. Required fields are marked *