Connect with us

Cinema News

“ರಾಮರಸ” ಚಿತ್ರದ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆ

Published

on

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಜಿ ಸಿನಿಮಾಸ್ ಗುರು ದೇಶಪಾಂಡೆ ಪ್ರೊಡಕ್ಷನ್ಸ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಸಂಯುಕ್ತವಾಗಿ ನಿರ್ಮಿಸುತ್ತಿರುವ ಮೈತಿಕಲ್ ಫ್ಯಾಂಟಸಿ ಡ್ರಾಮಾ ಶೈಲಿಯ ಅದ್ದೂರಿ ಸಿನಿಮಾ ‘ರಾಮರಸ’ ಮತ್ತೊಂದು ಕುತೂಹಲಕಾರಿ ಅಪ್‌ಡೇಟ್ ನೀಡಿದೆ. ‘ರಾಜಾಹುಲಿ’ ಖ್ಯಾತಿಯ ಗುರು ದೇಶಪಾಂಡೆ ನಿರ್ಮಾಣದಲ್ಲಿ ಹಾಗೂ ‘ಜಟ್ಟ’, ‘ಮೈತ್ರಿ’ ಚಿತ್ರಗಳ ಮೂಲಕ ಪ್ರಸಿದ್ಧರಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಪ್ರಜ್ವಲ್ ದೇವರಾಜ್ ಅಭಿನಯದ ವಿಶೇಷ ಪಾತ್ರದ ಹೊಸ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ‘ಗುರು ಸಿದ್ಧ’ ಎಂಬ ವಿಭಿನ್ನ ಹಾಗೂ ಶಕ್ತಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ ಸಂಪ್ರದಾಯವಾದ ‘ಸುಡುಗಾಡು ಸಿದ್ಧ’ ಸಮುದಾಯದ ಹಿನ್ನೆಲೆಯ ಈ ಪಾತ್ರವು ವಿಶೇಷವಾಗಿದ್ದು, ಭಗವಾನ್ ಶಿವನ ಭಕ್ತರಾಗಿರುವ ಈ ಸಮುದಾಯದ ಜೀವನ ಶೈಲಿ, ಮಾಯಾಜಾಲ, ಭವಿಷ್ಯವಾಣಿ ಮತ್ತು ಔಷಧೀಯ ಜ್ಞಾನಗಳನ್ನು ಚಿತ್ರದಲ್ಲಿ ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಹಳ್ಳಿಗಳನ್ನು ದುಷ್ಟಶಕ್ತಿಗಳಿಂದ ಕಾಪಾಡುವ ಈ ಪರಂಪರೆಯ ವೈಶಿಷ್ಟ್ಯವನ್ನು ಪ್ರಜ್ವಲ್ ದೇವರಾಜ್ ಅವರ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮೂಡಿಸಲಾಗುತ್ತಿದೆ.

ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ನಿರ್ಮಾಣದ ಈ ಚಿತ್ರದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಗುರು ದೇಶಪಾಂಡೆ ಕಾರ್ಯನಿರ್ವಹಿಸಿದ್ದು, ಕಾರ್ತಿಕ್ ಮಹೇಶ್, ಹಾಸ್ಯ ಚಕ್ರವರ್ತಿ ಶರಣ್, ಹೆಬ್ಬಾ ಪಟೇಲ್, ಬಾಲಾಜಿ ಮನೋಹರ, ವೈಶಾಲಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಂತ್ರಿಕವಾಗಿ ಚಿತ್ರಕ್ಕೆ ಎ.ವಿ. ಕೃಷ್ಣಕುಮಾರ್ (ಕೆಕೆ) ಅವರ ಛಾಯಾಗ್ರಹಣ, ಭರತ್ ಬಿ.ಜೆ ಅವರ ಸಂಗೀತ, ರಾಜ್ಯ ಪ್ರಶಸ್ತಿ ವಿಜೇತ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ, ‘ಕಾಂತಾರ’ ಖ್ಯಾತಿಯ ಅರ್ಜುನ್ ರಾಜ್ ಅವರ ಸ್ಟಂಟ್ ಸಂಯೋಜನೆ, ಮುರುಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನ ಸೇರಿವೆ.

ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ‘ರಾಮರಸ’ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬೆಂಗಳೂರು ಮತ್ತು ಚೆನ್ನೈಯ ಪ್ರಮುಖ ಸ್ಟುಡಿಯೋಗಳಲ್ಲಿ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ಚಿತ್ರತಂಡ ತಿಳಿಸಿದೆ.

ಈ ನೂತನ ಪೋಸ್ಟರ್ ಬಿಡುಗಡೆ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಮಿತ್ರರಿಗೆ ಚಿತ್ರತಂಡವು ಆತ್ಮೀಯ ಆಹ್ವಾನ ನೀಡಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *