Connect with us

Cinema News

ಆಗಸ್ಟ್‌ 9ಕ್ಕೆ ಕೋಮಲ್‌ – ದರ್ಶನ್‌‌ ನಡುವೆ ಬಾಕ್ಸ್ ಆಫೀಸ್ ಫೈಟ್

Published

on

ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಯಾಂಡಲ್ವುಡ್‌ನಲ್ಲಿ ಕೋಮಲ್‌ ನಟನೆಯ ಕೆಂಪೇಗೌಡ-2 ಮತ್ತು ದರ್ಶನ್‌ ನಟನೆಯ ಕುರುಕ್ಷೇತ್ರ ಸಿನಿಮಾಗಳು ಮುಖಾಮುಖಿಯಾಗಲಿವೆ.

ಈ ಹಿಂದೆ ಕುರುಕ್ಷೇತ್ರ ಚಿತ್ರ ಆಗಸ್ಟ್‌ 2ಕ್ಕೆ ಬಿಡುಗಡೆಯಾಗಲಿದೆ ಎಂದು ಅನೌನ್ಸ್‌ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಅದನ್ನು 9ಕ್ಕೆ ಮುಂದೂಡಲಾಯಿತು. ಈ ಮಧ್ಯೆ ಕೋಮಲ್‌ ಕೆಂಪೇಗೌಡ ಸಿನಿಮಾವನ್ನು ಆಗಸ್ಟ್‌ 9ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಅನೌನ್ಸ್‌ ಮಾಡಿದರು. ಆದರೆ ಈಗ ಸಡನ್ನಾಗಿ ಕುರುಕ್ಷೇತ್ರವನ್ನು ಅದೇ ದಿನ ಬಿಡುಗಡೆ ಮಾಡಲು ಪ್ಲಾನ್‌ ಆಗಿರುವುದರಿಂದ ಎರಡು ಸಿನಿಮಾಗಳ ನೇರ ಪೈಪೋಟಿಗಿಳಿದಂತಾಗಿದೆ.

ಈ ಹಿಂದೆ ಕೋಮಲ್‌ ದರ್ಶನ್‌ ಅವರ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಬಿಡುಗಡೆ ಮಾಡಲುಪ್ಲಾನ್‌ ಮಾಡಿಕೊಂಡಾಗ ಕುರುಕ್ಷೇತ್ರ ಇದ್ದಕ್ಕಿದ್ದ ಹಾಗೆ ಅದೇ ದಿನಾಂಕವನ್ನು ಅನೌನ್ಸ್‌ ಮಾಡಿರುವುದರಿಂದ ಈ ರೀತಿಯ ಸಮಸ್ಯೆ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನ ಕೋಮಲ್‌ ಮತ್ತು ದರ್ಶನ್‌ ಫೈಟ್‌ ಅಂತೂ ಆಗುತ್ತದೆ.

Spread the love

Continue Reading
Click to comment

Leave a Reply

Your email address will not be published. Required fields are marked *