Connect with us

Movie Reviews

ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5

Published

on

ಚಿತ್ರ: ಪಾರ್ವತಮ್ಮನ ಮಗಳು

ನಿರ್ದೇಶಕ: ಶಂಕರ್‌

ನಿರ್ಮಾಪಕ: ದಿಶ ಎಂಟರ್‌ಪ್ರೈಸಸ್‌

ಸಂಗೀತ: ಮಿದುನ್‌ ಮುಕುಂದನ್‌

ತಾರಾಗಣ: ಹರಿಪ್ರಿಯಾ, ಪ್ರಭು, ಸೂರಜ್‌ ಗೌಡ, ತರಂಗ ವಿಶ್ವ, ಸುಮಲತಾ

ರೇಟಿಂಗ್‌ – 3.5/5

ಮಹಿಳಾ ಪ್ರಧಾನ ಸಿನಿಮಾಗಳು ಸಾಮಾನ್ಯವಾಗಿ ಆರ್ಟ್‌ ಸಿನಿಮಾಗಳಾಗಿರುತ್ತದೆ,ಇಲ್ಲವೇ ಅಳುಮುಂಜಿ ಚಿತ್ರವಾಗಿರುತ್ತದೆ. ಆದರೆ ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರ ಮಾತ್ರ ಇದೆಲ್ಲಕ್ಕಿಂತ ಭಿನ್ನವಾಗಿದ್ದು, ಹರಿಪ್ರಿಯಾರಂಥಹ ದೊಡ್ಡ ನಾಯಕಿಯನ್ನು ಇಟ್ಟುಕೊಂಡು ಸಖತ್‌ ಕಮರ್ಷಿಯಲ್‌ ಸಬ್ಜೆಕ್ಟ್‌ ನ್ನು ತೆರೆ ಮೇಲೆ ತಂದಿದ್ದಾರೆ ನಿರ್ದೇಶಕರು.

ಇಡಿ ಸಿನಿಮಾ ಹುಡುಗಿಯೊಬ್ಬಳ ಕಥೆ ಸುತ್ತ ಸಾಗುತ್ತದೆ. ಕೊಲೆ ಕೇಸ್‌ಕಂಡು ಹಿಡಿಯುವ ಕಥೆಯಾದ್ದರಿಂದ ಅದಕ್ಕೆ ರಚಿಸಿರುವ ಚಿತ್ರಕಥೆ ರೋಚಕವಾಗಿ ಮೂಡಿ ಬಂದಿದೆ. ಇನ್ನು ತಾಯಿ[ಸುಮಲತಾ] ಗೆ ಇರುವ ಪಾತ್ರ ಬಹಳ ಚಿಕ್ಕದಾಗಿದ್ದರೂ, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಬ್ಬರು ಸ್ವಂತ ತಾಯಿ ಮಗಳಂತೆ ಕಾಣುತ್ತಾರೆ.

ಇಡೀ ಸಿನಿಮಾಗೆ ಹಿನ್ನೆಲೆ ಸಂಗೀತ ಮತ್ತು ಹೊಸ ರೀತಿಯ ನಿರೂಪಣೆಯಿಂದ ಚಿತ್ರ ಇಷ್ಟವಾಗುತ್ತದೆ.

ಹರಿಪ್ರಿಯಾ ವರ ನಟನೆ ಹಿಂದಿನ ಸಿನಿಮಾಗಳಿಗಿಂತಲೂ ಡಿಫ್ರೆಂಟ್‌ ಆಗಿದ್ದು, ಉತ್ತಮವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಲೀಲಾ ಜಾಲವಾಗಿ ಫೈಟ್‌ ಬೈಕ್‌ ಓಡಿಸುವುದು ಎಲ್ಲವನ್ನು ಮಾಡಿದ್ದರೆ. ತಾಯಿಯಾಗಿ ಸುಮಲತಾ ಅವರದ್ದು ಸಮಚಿತ್ತದ ನಟನೆ. ಪ್ರಭು, ಸೂರಜ್‌ಗೌಡ ಸೇರಿದಂತೆ ಎಲ್ಲರ ತಮಗೆ ನೀಡಿದ ಕೆಲಸವನ್ನು ಅಚ್ಚಕಟ್ಟಾಗಿ ಮಾಡಿದ್ದಾರೆ. ಒಟ್ಟಿನ್ಲಲಿ ನಾಯಕನಿಗೆ ಹೊಂದಿಕೊಳ್ಳುವ ಕಥೆಯನ್ನು ಇಟ್ಟುಕೊಂಡು ಮಹಿಳೆಯನ್ನು ನಾಯಕಿಯನ್ನಾಗಿ ಮಾಡಿ ಹೊಸ ರೀತಿಯಲ್ಲಿ ಕಥೆ ಹೇಳಿದ್ದಾರೆ ನಿರ್ದೇಶಕ ಶಂಕರ್‌.

ಈ ವಾರಾಂತ್ಯಕ್ಕೆ ಒಮ್ಮೆ ನೋಡಬಹುದಾದಂತಹ ಸಿನಿಮಾಗಳ ಸಾಲಿನಲ್ಲಿ ಇದು ನಿಲ್ಲುತ್ತದೆ. 

Spread the love

Continue Reading
Click to comment

Leave a Reply

Your email address will not be published. Required fields are marked *