Cinema News
ರಾಕಿ ಭಾಯ್ ಬರ್ತ್‌ಡೇಗೆ 5000 ಕೆಜಿ ಕೇಕ್

ರಾಕಿಂಗ್ ಸ್ಟಾರ್ ಯಶ್ ಜ.8ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅದಕ್ಕಾಗಿ ಅಭಿಮಾನಿಯೊಬ್ಬರು 5000 ಕೆಜಿ ತೂಕದ ಕೇಕ್ ತಯಾರಿಸಲಾಗುತ್ತಿದೆ.
ಕೆಜಿಎಫ್ ನಂತರ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿದ್ದಾರೆ. ಅವರನ್ನು ಹುಡುಕಿಕೊಂಡು ತಮಿಳು ನಾಡು, ಆಂಧ್ರ, ಮುಂಬೈನಿಂದೆಲ್ಲ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಅವರ ಹುಟ್ಟು ಹಬ್ಬ ಅದ್ಧೂರಿಯಾಗಿ ನಡೆಯಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ.
ವೇಣು ಎನ್ನುವ ಅಭಿಮಾನಿ ರಾಕಿಂಗ್ ಸ್ಟಾರ್ ಬರ್ತ್‌ಡೆಗಾಗಿ ಇಷ್ಟು ದೊಡ್ಡ ಗಾತ್ರದ ಕೇಕ್‌ನ್ನು ತಯಾರಿಸಲಿದ್ದು, ಅವರ ಹುಟ್ಟು ಹಬ್ಬದ ದಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದನ್ನು ಯಶ್ ಕತ್ತರಿಸಲಿದ್ದಾರೆ.

Continue Reading