Cinema News
ಜಂಟಲ್ ಮನ್ ಗಾಗಿ ಹಾಡಿದ ವಸಿಷ್ಠ ಸಿಂಹ

ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮನ್ ತನ್ನ ವಿಭಿನ್ನ ಶೈಲಿಯ ಕಥೆಯಿಂದಾಗಿ ಗಮನ ಸೆಳೆದಿತ್ತು. ಈಗ ಈ ಸಿನಿಮಾದ ಹಾಡು ಬಿಡುಗಡೆಯಾಗುತ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡನ್ನು ನಟ ವಸಿಷ್ಠ ಸಿಂಹ ಹಾಡಿದ್ದಾರೆ.ರಾಜ ಹಂಸ ಎಂಬ ಸಿನಿಮಾ ಮೂಲಕ ನಿರ್ದೇಶಕರಾಗಿದ್ದ ಜಡೇಶ್‌ಕುಮಾರ್ ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಗುರುದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.
ಜಂಟಲ್‌ಮನ್ ಚಿತ್ರ ಪ್ರಜ್ವಲ್ ದೇವರಾಜ್ ಮಟ್ಟಿಗೆ ಬೇರೆ ರೀತಿಯ ಚಿತ್ರ. 18 ಗಂಟೆಗಳ ಕಾಲ ನಿದ್ರೆಯಲ್ಲಿರುವ ಯುವಕನ ಕಥೆ ಇದಾಗಿದ್ದು, ನಿಶ್ವಿಕಾ ನಾಯ್ಡು ಜಂಟಲ್‌ಮನ್‌ಗೆ ಜೋಡಿಯಾಗಿದ್ದಾರೆ.

ಇನ್ನು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಜನೀಶ್ ಲೋಕನಾಥ್ ಅವರ ಸಂಗೀತದ ಸಾರಥ್ಯದಲ್ಲಿ ವಸಿಷ್ಠ ಸಿಂಹ ಮೊದಲ ಬಾರಿಗೆ ಹಾಡಿದ್ದರು. ಈಗ ಅದೇ ಕಾಂಬಿನೇಶನ್ ಜಂಟಲ್ ಮನ್‌ನನಲ್ಲಿಯೂ ಒಂದಾಗುತ್ತಿದೆ. ಈ ಬಾರಿಯೂ ಒಂದು ವಿಶೇಷ ಹಾಡಿನೊಂದಿಗೆ ಈ ಜೋಡಿ ಒಂದಾಗುತ್ತಿದೆ.
ಒಟ್ಟಿನಲ್ಲಿ ಇದೇ 18ಕ್ಕೆ ವಸಿಷ್ಠ ಸಿಂಹ ಹಾಡಿರುವ ಹಾಡು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ.
