Connect with us

Cinema News

ಖ್ಯಾತ ಕಬ್ಬಡಿ ಆಟಗಾರ ’ಅರ್ಜುನ್ ಚಕ್ರವರ್ತಿ’ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್

Published

on

ಅರ್ಜುನ್ ಚಕ್ರವರ್ತಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು, ಪದಕವನ್ನು ಹಿಡಿದುಕೊಂಡು ಮೈಕ್ ಮುಂದೆ ತಮ್ಮ ಗೆಲುವಿನ ಕ್ಷಣವನ್ನು ಅರ್ಜುನ್ ಚಕ್ರವರ್ತಿ ವಿವರಿಸಿದ್ದಾರೆ. ವಿಕ್ರಾಂತ್ ರುದ್ರ ನಿರ್ದೇಶನದ ವಿಜಯ ರಾಮರಾಜು ಅರ್ಜುನ್ ಚಕ್ರವರ್ತಿಯಾಗಿ ನಟಿಸಿದ್ದು, ಸಿಜಾ ರೋಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅರ್ಜುನ್ ಚಕ್ರವರ್ತಿ , 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಬಡ್ಡಿ ಆಟಗಾರ ನೈಜ ಕಥೆಯನ್ನು ಆಧರಿಸಿದೆ. ಒಬ್ಬ ಕ್ರೀಡಾಪಟುವಿನ ಜೀವನದ ಹೋರಾಟಗಳು ಮತ್ತು ಗೆಲುವಿನ ಸುತ್ತಾ ಸಿನಿಮಾ ಸಾಗುತ್ತದೆ. ಪೋಷಕ ಪಾತ್ರಗಳಲ್ಲಿ ಅಜಯ್, ದಯಾನಂದ ರೆಡ್ಡಿ, ಅಜಯ್ ಘೋಷ್ ಮತ್ತು ದುರ್ಗೇಶ್ ಇದ್ದಾರೆ.

ವಿಘ್ನೇಶ್ ಬಾಸ್ಕರನ್ ಸಂಗೀತ ಮತ್ತು ಜಗದೀಶ್ ಚೀಕಾಟಿ ಛಾಯಾಗ್ರಹಣವಿದೆ. ಗ್ಯಾನೆಟ್ ಸೆಲ್ಯುಲಾಯ್ಡ್ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಚಿತ್ರಕ್ಕೆ ಹಣ ಹಾಕಿದ್ದಾರೆ. ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಲಾಗುತ್ತದೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಶ್ರೀನಿ ಗುಬ್ಬಾಳ, ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್” ಕೇವಲ ಸಿನಿಮಾವಲ್ಲ. ಸವಾಲುಗಳನ್ನು ಮೀರಿ ಎದ್ದುನಿಲ್ಲುವ ಮತ್ತು ನಮಗೆಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಗೌರವವಾಗಿದೆ. ಅರ್ಜುನ್ ಚಕ್ರವರ್ತಿ ಸಿನಿಮಾ ಮೂಲಕ ನಾವು ಮಾನವ ಇಚ್ಛೆಯ ಶಕ್ತಿಯನ್ನು ಮತ್ತು ಮಾನವ ಆತ್ಮದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *