Cinema News
ಸ್ವಮೇಕ್ ಸಿನಿಮಾ ಮಾಡ್ತಾರೆ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಐದು ವರ್ಷಗಳ ನಂತರ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಾರೆ ಅದು ಭರತ್ ಅನೇ ನೇನು ಚಿತ್ರದ ರಿಮೇಕ್ ಎಂದೆಲ್ಲ ಸುದ್ದಿಯಾಗಿತ್ತು. ಆದರೆ ಸುದೀಪ್ ಈಗ ಅದಕ್ಕೆ ಉತ್ತರಿಸಿದ್ದಾರೆ.
ವೆಬ್‌ಸೈಟ್ ಒಂದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿರುವ ಅವರು ನಾನು ನಿರ್ದೇಶನ ಮಾಡುತ್ತಿರುವುದು ನಿಜ ಅದಕ್ಕಾಗಿ ಹೊಸದಾಗಿ ಕಥೆ ಬರೆಯುತ್ತಿದ್ದೇನೆ. ಇದು ಯಾವುದೇ ಕಾರಣಕ್ಕೂ ರಿಮೇಕ್ ಆಗಿರುವುದಿಲ್ಲ ಎಂದಿದ್ದಾರೆ.
ಸುದೀಪ್ ಈ ಹಿಂದೆ ನಿರ್ದೇಶನ ಮಾಡಿರುವ ಮೈ ಆಟೋಗ್ರಾಫ್, ಶಾಂತಿನಿವಾಸ, ಮಾಣಿಕ್ಯ ,ಕೆಂಪೇಗೌಡ, ತೆಲುಗು ಅಥವಾ ತಮಿಳಿನ ರಿಮೇಕ್ ಚಿತ್ರಗಳಾಗಿದ್ದವು. ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮಾತ್ರ ಸ್ವಮೇಕ್ ಆಗಿತ್ತು. ಆದರೆ ಅದು ಯಾಕೋ ಅಷ್ಟೊಂದು ಹಿಟ್ ಆಗಲಿಲ್ಲ. ಈ ಬಾರಿ ಅವರು ಸ್ವಮೇಕ್ ಚಿತ್ರ ಕೈಗೆತ್ತಿಕೊಂಡಿದ್ದು ಈಗಾಗಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.