Cinema News
‘ಲವ್ ಮಾಕ್ ಟೇಲ್’ಗೆ ಬೆನ್ನೆಲುಬಾಗಿ ನಿಂತ ಸುದೀಪ್

ಡಾರ್ಲಿಂಗ್ ಕೃಷ್ಣ ನಾಯಕ ನಟನನಾಗಿ, ನಿರ್ದೇಶನ ಮಾಡಿರುವ ಲವ್ ಮಾಕ್‌ಟೇಲ್ ರಿಲೀಸ್ ಡೇಟ್ ಹತ್ತಿರ ಬಂದ ಹಾಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸುತ್ತಿದೆ.
ಈ ಚಿತ್ರಕ್ಕೆ ಸುದೀಪ್ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಇತ್ತೀಚೆಗೆ ನಡೆದ ಆಡಿಯೋ ರಿಲೀಸ್ ನ್ನು ಸುದೀಪ್ ಅವರೇ ಮಾಡಿಕೊಟ್ಟಿದ್ದಲ್ಲದೆ, ಸಿನಿಮಾವನ್ನು ಸಹ ತಮ್ಮ ಮನೆಯಲ್ಲಿ ತರಿಸಿಕೊಂಡು ನೋಡಿದ್ದಾರೆ. ಈ ಮೂಲಕ ಹೊಸ ನಿರ್ದೇಶಕರನ್ನು ಬೆನ್ನುತಟ್ಟುವ ಕೆಲಸ ಅವರ ಮಾಡುತ್ತಿದ್ದಾರೆ.
‘ನಾನು ಸುದೀಪ್ ಅವರನ್ನು ಆಡಿಯೊ ರಿಲೀಸ್ ಮಾಡಿಕೊಡಬೇಕು ಎಂದು ಹೇಳಿದ ಅಷ್ಟೇ, ಅವರು ನೀನು ನನ್ನ ತಮ್ಮನ ರೀತಿ ನಾನು ಬಂದೇ ಬರುತ್ತೇನೆ ಎಂದು 10 ನಿಮಿಷ ಮುಂಚೆ ಬಂದು ಕಾಯುತ್ತಿದ್ದರು. ಇದಾದ ಮೇಲೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ನೋಡಿದ ಅವರು ಸಿನಿಮಾವನ್ನು ನೋಡುತ್ತೇನೆ ಎಂದು ತರಿಸಿಕೊಂಡು ನೋಡಿದ್ದಾರೆ. ಚಿತ್ರದ ಬಗ್ಗೆ ಉತ್ತಮ ಮಾತುಗಳನ್ನು ಸಹ ಆಡಿದ್ದಾರೆ. ಇದು ನನ್ನಂತಹ ಡೆಬ್ಯು ಡೈರೆಕ್ಟರ್‌ಗೆ ಒಂದು ದೊಡ್ಡ ಬಲ ಎಂದು ಹೇಳುತ್ತಾರೆ ಕೃಷ್ಣ.
ಈ ಚಿತ್ರದಲ್ಲಿ ಕೃಷ್ಣ ಅವರಿಗೆ ಜೋಡಿಯಾಗಿ ಮಿಲನಾ ನಾಗರಾಜ್, ಅಮೃತಾ ಅಯ್ಯಾಂಗರ್ ನಟಿಸಿದ್ದಾರೆ. ಈಗಾಗಲೇ ಟ್ರೇಲರ್, ಹಾಡುಗಳು ಸೂಪರ್ ಹಿಟ್ ಆಗಿದ್ದು ಇದೇ 31ಕ್ಕೆ ಚಿತ್ರ ರಿಲೀಸ್ ಆಗಲಿದೆ.
