Cinema News

ಕನ್ನಡಕ್ಕೆ ಬರ್ತಾರೆ ಸಲ್ಮಾನ್ ಖಾನ್‌..!

Published

on

ಬಾಲಿವುಡ್‌ನ ಬ್ಯಾಡ್‌ ಬಾಯ್‌ ಸಲ್ಮಾನ್‌ ಖಾನ್‌ ಸದ್ಯದಲ್ಲೇ ಕನ್ನಡಕ್ಕೆ ಬರಲಿದ್ದಾರೆ. ಅರೇ!  ಇದೇನಿದು ಸಲ್ಮಾನ್‌ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಎಂದರೆ ಇಲ್ಲ. ಸಲ್ಮಾನ್‌ಖಾನ್‌ ನಟನೆಯ ದಬಾಂಗ್‌-3 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್‌ ಆಗಲಿದೆ.

 

ಹೌದು ಸುದೀಪ್‌ ಮತ್ತು ಸಲ್ಲು ಕಾಂಬಿನೇಶನ್‌ನ ದಬಾಂಗ್-3 ಕನ್ನಡಕ್ಕೆ ಡಬ್ಬಿಂಗ್‌ ಆಗಿ ಬಿಡುಗಡೆಯಾಗಲಿದೆ.. ಜತೆಗೆ ಸುದೀಪ್‌ ನಟನೆಯ ಪಾತ್ರಕ್ಕೆ ಸ್ವತಃ ಸುದೀಪ್‌ ಅವರೇ ಡಬ್ಬಿಂಗ್‌ ಸಹ ಮಾಡಲಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್‌ ಅವರೇ ತಿಳಿಸಿದ್ದಾರೆ.

 

 

ಈ ಸಿನಿಮಾದಲ್ಲಿ ಸುದೀಪ್‌ ಸಲ್ಮಾನ್‌ ಖಾನ್‌ ಎದುರು ವಿಲನ್‌ ಆಗಿದ್ದಾರೆ. ಜತೆಗೆ 80ಕ್ಕೂ ಹೆಚ್ಚು ದಿನಗಳ ಡೇಟ್ಸ್‌ ನೀಡಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಕನ್ನಡಿಗರಿಗೂ ಬಾರಿ ಕೂತಹಲವಿದ್ದು, ಅವರಿಗಾಗಿಕನ್ನಡದಲ್ಲಿ ಸಿನಿಮಾವನ್ನು ತೋರಿಸುವ ತೀರ್ಮಾನ ಮಾಡಿದೆಯಂತೆ ಚಿತ್ರತಂಡ.

 

ಇನ್ನೂ ವಿಶೇಷ ಎಂದರೆ ಈ ಸಿನಿಮಾವನ್ನು ಕನ್ನಡಿಗ ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯದಲ್ಲೇ ಸಲ್ಮಾನ್‌ ಖಾನ್‌ ಬಾಯಲ್ಲಿ ಕನ್ನಡ ಭಾಷೆಯನ್ನು ಕೇಳಬಹುದು.

Spread the love
Click to comment

Copyright © 2019 PopcornKannada.com