Cinema News
ಜೂನ್ 14 ಕ್ಕೆ ‘ಸಿಂಗ’ ಟ್ರೇಲರ್ ಬಿಡುಗಡೆ

ಶ್ಯಾನೆ ಟಾಪ್ಗವ್ಳೆ ಹಾಡಿನ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸಿಂಗ ಸಿನಿಮಾದ ಟ್ರೇಲರ್ ಇದೇ 14ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ.
ಚಿರಂಜೀವಿ ಸರ್ಜಾ ಮತ್ತು ಆದಿತಿ ಪ್ರಭುದೇವ ನಟಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿತ್ತು. ಚಿರಂಜೀವಿ ಸರ್ಜಾ ಈ ಸಿನಿಮಾಗಾಗಿ ಸಿಂಗಂ ಮಾದರಿಯ ಮೀಸೆ ಬಿಟ್ಟಿದ್ದು, ಅದು ಕೂಡಾ ಅವರ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಈಗ ಟ್ರೇಲರ್ ಮೂಲಕ ಮತ್ತೊಮ್ಮೆ ತಮ್ಮ ಹವಾ ಎಬ್ಬಿಸಲು ಚಿತ್ರತಂಡ ಬರುತ್ತಿದೆ.
ಶ್ಯಾನೆ ಟಾಪಗವ್ಳೆ ಹಾಡಂತೂ, ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹಾಗಾಗಿ ಈ ಟ್ರೇಲರ್ ಇನ್ನೂ ಪವರ್ ಫುಲ್ ಆಗಿರುತ್ತದೆ ಎಂಬುದು ಚಿರು ಅಭಿಮಾನಿಗಳ ಮಾತಾಗಿದೆ. ಉದಯ್ ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ.

Continue Reading