Cinema News
ನಮ್ಮ ಶಿವಣ್ಣ “RDX“ ಬಾಂಬ್

ಶಿವರಾಜ್‌ಕುಮಾರ್ ನಟನೆಯ ಮತ್ತೊಂದು ಚಿತ್ರ 2020ಕ್ಕೆ ಸೆಟ್ಟೇರಲಿದ್ದು, ಆ ಚಿತ್ರಕ್ಕೆ RDX ಎಂದು ಹೆಸರಿಡಲಾಗಿದೆ.
ತಮಿಳು ಚಿತ್ರರಂಗದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಸತ್ಯ ಜ್ಯೋತಿ ಪಿಕ್ಚರ್ಸ್ ವತಿಯಿಂದ ಈ ಸಿನಿಮಾ ನಿರ್ಮಾಣ ವಾಗುತ್ತಿದೆ. ರವಿ ಅರಸು ಎಂಬ ಹೊಸ ನಿರ್ದೇಶಕರು ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ವಿಶೇಷ ಎಂದರೆ ಕಳೆದ ವರ್ಷದ ತಮಿಳಿನ ಸೂಪರ್‌ಹಿಟ್ ಸಿನಿಮಾ ವಿಶ್ವಾಸಂ ಚಿತ್ರವನ್ನು ಇದೇ ಸತ್ಯಜ್ಯೋತಿ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ ಪ್ರಿಯಾ ಆನಂದ್ ನಾಯಕಿಯಾಗುವ ಸಾಧ್ಯತೆ ಇದೆ. ಪ್ರಿಯಾ ಆನಂದ್ ರಾಜಕುಮಾರ, ಆರೇಂಜ್ ಚಿತ್ರಗಳಲ್ಲಿ ನಟಿಸಿದ್ದರು.

Continue Reading