News
ನಟಿ ಸಂಜನಾ ಆನಂದ್ ಮತ್ತು ನಟ ಅನಿರುದ್ಧ್ TV9 ಲೈಫ್ ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್‌ಪೋಗೆ ಚಾಲನೆ ನೀಡಿದರು.

2023ರಲ್ಲಿ TV9 ಕನ್ನಡ ಆಯೋಜಿಸಿದ ಈ ಕಾರ್ಯಕ್ರಮವು ವಿಶೇಷ ಯಶಸ್ಸು ಸಾಧಿಸಿತು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈ ವರ್ಷವೂ ಅದೇ ರೀತಿ ಪ್ರಭಾವತ್ಮಕವಾಗಿ ಆರಂಭಗೊಂಡಿದ್ದು, ನಟಿ ಸಂಜನಾ ಮತ್ತು ನಟ ಅನಿರುದ್ಧ್ ಅವರು ಎಕ್ಸ್‌ಪೋ ಉದ್ಘಾಟನೆ ಮಾಡಿದರು.

TV9 ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮುಂದುವರೆಸುತ್ತ, ಜನರಿಗೆ ಅನುಕೂಲಕರ ಮತ್ತು ಭವಿಷ್ಯದ ನಿರ್ಧಾರಗಳಿಗೆ ಮಾರ್ಗದರ್ಶಕರಾಗುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಬಾರಿ, ಎಕ್ಸ್‌ಪೋ ಉದ್ಘಾಟನೆಗೆ ನಟಿ ಸಂಜನಾ ಮತ್ತು ನಟ ವಿರಾಟ್ ಭಾಗವಹಿಸಿದರು. ಅವರು ಕೆಲ ಹೊಸ ಮಾದರಿಯ ಕಾರುಗಳನ್ನು ಅನಾವರಣಗೊಳಿಸಿದರು.

ಗ್ರಾಹಕರಿಗೆ ಬೇಕಾದ ವಿವಿಧ ವಸ್ತುಗಳು ಮತ್ತು ಕಾರುಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು, ತ್ರಿಪುರ ವಾಸಿನಿಯಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಎಕ್ಸ್‌ಪೋ 5 ಮತ್ತು 6ರಂದು ಉಚಿತ ಪ್ರವೇಶವಿದ್ದು, ದಸರಾ ಸಂಭ್ರಮದಲ್ಲಿ ಹೊಸ ವಸ್ತುಗಳ ಖರೀದಿಗೆ ಉತ್ಸುಕರಾಗಿರುವವರಿಗೆ ಇದು ಅನನ್ಯ ಅವಕಾಶವಾಗಿದೆ.


Continue Reading