Cinema News
ಮಂಗಳೂರಿನ ಭೂಗತ ಲೋಕದಲ್ಲಿ ಸಲಗದ ಕಾದಾಟ

ಮೇಕಿಂಗ್ ವಿಡಿಯೋ, ಟೀಸರ್, ಸೂರಿಯಣ್ಣ ಹಾಡು ಹೀಗೆ ಸಾಕಷ್ಟು ಕಂಟೆಂಟ್‌ಗಳ ಮೂಲಕ ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ಚಿತ್ರವಾಗಿರುವ ಸಲಗ ಸಿನಿಮಾದ ಚಿತ್ರೀಕರಣ ಈಗ ಮಂಗಳೂರಿನಲ್ಲಿ ನಡೆಯುತ್ತಿದೆ.
ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಹೇಳುವ ಈ ಸಲಗ ಸಿನಿಮಾದಲ್ಲಿ ಮಂಗಳೂರಿನ ಡಾನ್‌ಗಳು ಸಹ ಬರುತ್ತಾರಂತೆ ಹಾಗಾಗಿ ದುನಿಯಾ ವಿಜಯ್ ಮತ್ತು ತಂಡ ಕಳೆದ ಮೂರು ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ.
‘ಸಲಗ ಸಿನಿಮಾದ ಕೆಲ ಭಾಗದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿದ್ದೇವೆ. ಮಂಗಳೂರಿನ ಸ್ಥಳೀಯ ಕಲಾವಿದರನ್ನೇ ಶೂಟಿಂಗ್‌ಗೆ ಬಳಸಿಕೊಂಡಿದ್ದು, ಸಾವಿರಾರು ಜನ ಸೇರುವ ಮೀನು ಮಾರುಕಟ್ಟೆಯಲ್ಲಿ ಚಿತ್ರೀಕರೀಸಿದ್ದೇವೆ. ಜನರ ಬೆಂಬಲ ಬಹಳ ಚೆನ್ನಾಗಿದ್ದ ಕಾರಣ ಶೂಟಿಂಗ್ ಸಾಂಗವಾಗಿ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮುಗಿದರೆ ಶೂಟಿಂಗ್ ಕಂಪ್ಲೀಟ್ ಆಗುತ್ತದೆ ಎನ್ನುತ್ತಾರೆ ದುನಿಯಾ ವಿಜಯ್.
ಈ ಚಿತ್ರದಲ್ಲಿ ಡಾಲಿ ಧನಂಜಯ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಸಂಜನಾ ಆನಂದ್ ಸೇರಿದಂತೆ ಬಹು ತಾರಾಗಣವೇ ಚಿತ್ರದಲ್ಲಿದೆ.
