Cinema News
ಆನಂದ್‌ಗೆ ಮುಹೂರ್ತ ಆಗಿದ್ದ ದಿನವೇ ‘RDX’ಗೂ ಮುಹೂರ್ತ

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಟನೆಯ ಹೊಚ್ಚ ಹೊಸ ಚಲನಚಿತ್ರ “ಆರ್‌ಡಿಎಕ್ಸ್” ಮುಹೂರ್ತ ಫೆ.19ಕ್ಕೆ ನಡೆಯಲಿದೆ. ವಿಶೇಷ ಎಂದರೆ ಅದೇ ದಿನ ಶಿವರಾಜ್‌ಕುಮಾರ್ ನಟನೆಯ ಮೊಟ್ಟ ಮೊದಲ ಚಿತ್ರ ‘ಆನಂದ್’ಗೂ ಮುಹೂರ್ತವಾಗಿತ್ತು.
ಆರ್‌ಡಿಎಕ್ಸ್ ಸಿನಿಮಾವನ್ನು ರವಿ ಅರಸು ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದಾರೆ. ತಮಿಳುನಾಡಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಂಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇವರು ಈ ಹಿಂದೆ ತಮಿಳಿನಲ್ಲಿ ವಿವೇಗಂ, ವಿಶ್ವಾಸಂ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ತುಂಬಾ ವರ್ಷಗಳ ನಂತರ ಸತ್ಯಜ್ಯೋತಿ ಫಿಲಂಸ್ ಅವರು ಕನ್ನಡಕ್ಕೆ ಮತ್ತೆ ಮರಳಿದ್ದಾರೆ.
‘ಆರ್‌ಡಿಎಕ್ಸ್’ನಲ್ಲಿ ಶಿವರಾಜ್‌ಕುಮಾರ್ ಸೂಪರ್ ಕಾಪ್ ಅವತಾರವನ್ನು ತಾಳಲಿದ್ದಾರೆ. ಟಗರು ಖ್ಯಾತಿಯ ಚರಣ್ ರಾಜ್ ಮ್ಯೂಸಿಕ್ ಮಾಡಲಿದ್ದಾರೆ.


Continue Reading