Cinema News
ಮಾರ್ಚ್ 8ಕ್ಕೆ ರಂಗನಾಯಕ

ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಂಗನಾಯಕ ಮಾರ್ಚ್ ೮ರ ಶುಕ್ರವಾರ ಶಿವರಾತ್ರಿ ಪ್ರಯುಕ್ತ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪುಷ್ಪಕ ವಿಮಾನ ನಿರ್ಮಾಪಕ ವಿಖ್ಯಾತ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮಠ, ಎದ್ದೇಳು ಮಂಜುನಾಥದಂಥ ಅದ್ಭುತ ಚಿತ್ರಗಳನ್ನು ನೀಡಿದ ಗುರುಪ್ರಸಾದ್ ಜಗ್ಗೇಶ್ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.15 ವರ್ಷಗಳ ನಂತರ ಮತ್ತೆ ಒಂದಾದ ಜಗ್ಗಣ್ಣ ಮತ್ತು ಗುರುಪ್ರಸಾದ್ ಈಸಲ ಯಾವರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕಿದೆ.

ನಟ ಜಗ್ಗೇಶ್ , ಗುರುಪ್ರಸಾದ್, ಚೈತ್ರ ಕೊಟ್ಟೂರು, ಎಂ.ಕೆ.ಮಠ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ, ಸಾಮ್ರಾಟ್ ಅಶೋಕ್ ಗೌತಂ ಅವರ ಛಾಯಾಗ್ರಹಣ, ಉಮೇಶ್ ಬಿ.ಆರ್. ಅವರ ಸಂಕಲನ, ಕುಲಕರ್ಣಿ ಅವರ ಕಲಾನಿರ್ದೇಶನವಿದೆ.

Continue Reading