Cinema News
“ಏಕ್ ಲವ್ ಯಾ” ಚಿತ್ರಕ್ಕೆ ಡಿಂಪಲ್ ಕ್ವೀನ್ ನಾಯಕಿ

ರಕ್ಷಿತ್ ಪ್ರೇಮ್ ನಿರ್ಮಾಣದಲ್ಲಿ ಅವರ ತಮ್ಮ ರಾಣಾ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿರುವ “ಏಕ್ ಲವ್ ಯಾ” ಸಿನಿಮಾಗೆ ಕನ್ನಡ ಸದ್ಯದ ನಂಬರ್ ವನ್ ನಟಿ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸದ್ಯ ಶಿವಣ್ಣ ಅಭಿನಯದ “ಆನಂದ್” ಚಿತ್ರದ ಚಿತ್ರೀಕರಣ ಮತ್ತು “ಐ ಲವ್ ಯು” ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇರುವ ರಚಿತಾ ರಾಮ್ ಚಿತ್ರತಂಡಕ್ಕೆ ಶೀಘ್ರದಲ್ಲೆ ಸೇರಿಕೊಳ್ಳಲಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕಳೆದ ತಿಂಗಳು ಚಿತ್ರೀಕರಣ ಶುರು ಮಾಡಿತ್ತು. ಇದು ಒಂದು ಮ್ಯೂಸಿಕಲ್ ಅಕ್ಷ್ಯನ್ ಸಿನಿಮಾವಾಗುತ್ತದೆ ಎಂಬುದು ಪ್ರೇಮ್ ಅವರ ಮಾತಾಗಿದೆ.

Continue Reading