News
ಹೊಸ ಹೆಜ್ಜೆಯಿಟ್ಟ “ಜಂಭದ ಹುಡುಗಿ” .

“ಜಂಭದ ಹುಡುಗಿ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಪ್ರಿಯಾ ಹಾಸನ್, ನಂತರದ ದಿನಗಳಲ್ಲಿ ನಿರ್ಮಾಪಕಿ ಹಾಗೂ ನಿರ್ದೇಶಕಿ ಸಹ ಆದರು. ಈಗ ಪ್ರಿಯಾ ಹಾಸನ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಯಲಿದ್ದು, ನಿರ್ಮಾಪಕಕರ ವಲಯ ಸಮಿತಿಗೆ ಪ್ರಿಯಾ ಹಾಸನ್ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು,

ಪ್ರಿಯಾ ಹಾಸನ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಗೂ ಮುನ್ನ ಪ್ರಿಯಾ ಹಾಸನ್, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದ ಗಣ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಿರ್ಮಾಪಕರ ವಲಯದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಎ.ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಜೋಷಾಯ್ ಹಾಗೂ ನಿರ್ಮಾಪಕರ ವಲಯ ಸಮಿತಿಗೆ ಪ್ರಿಯಾ ಹಾಸನ್ ಸ್ಪರ್ಧಿಸುತ್ತಿದ್ದಾರೆ.

Continue Reading