Connect with us

Cinema News

ಪ್ರೈಮ್ ವೀಡಿಯೋದ ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆ

Published

on

ಅತ್ಯಂತ ಜನಪ್ರಿಯ ಸಿರೀಸ್‌ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ನ ಎರಡನೇ ಸೀಸನ್‌ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ. ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ ಮತ್ತು ಪ್ರೈಮ್ ವೀಡಿಯೋದ ಅತ್ಯುನ್ನತ ಒರಿಜಿನಲ್ ಸಿರೀಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಕಂಡಿದೆ.

2024 ಆಗಸ್ಟ್‌ 29 ರಂದು ಎರಡನೇ ಸೀಸನ್‌ ಜಾಗತಿಕವಾಗಿ ಅನಾವರಣಗೊಳ್ಳಲಿದೆ ಎಂದು ಪ್ರೈಮ್ ವೀಡಿಯೋ ಘೋಷಿಸಿದೆ. ಇದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಹಲವು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದೆ. ಅದ್ಭುತ ಹೊಸ ಸೀಸನ್‌ನ ಟೀಸರ್ ಇಂದು ಅನಾವರಣಗೊಳಿಸಲಾಯಿತು. ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್‌ ಪಾತ್ರದಲ್ಲಿ ಚಾರ್ಲಿ ವಿಕರ್ಸ್‌ ವಾಪಸ್ ಬರುವುದನ್ನು ಇದು ಚಿತ್ರಿಸಿದೆ.
ಅವರು ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಟೀಸರ್ ಪ್ರೇಕ್ಷಕರನ್ನು ಹೊಸ ಪಯಣವೊಂದಕ್ಕೆ ಕರೆದೊಯ್ಯಲಿದೆ. ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿಯನ್ನು ಇದು ಪ್ರತಿಫಲಿಸಲಿದೆ. ದೃಶ್ಯ ವೈಭವಕ್ಕೆ ಹೆಸರಾಗಿರುವ ಈ ಸಿರೀಸ್‌, ಅತ್ಯಂತ ಜನಪ್ರಿಯವಾದ ಹಲವು ಪಾತ್ರಗಳನ್ನು ಒಳಗೊಳ್ಳಲಿದೆ. ಗ್ಯಾಲಾಡ್ರಿಯೆಲ್‌, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್‌ ಅವರನ್ನು ಇದು ಒಳಗೊಳ್ಳಲಿದ್ದು,ಇನ್ನಷ್ಟು ನಿರೀಕ್ಷೆಗಳನ್ನು ಈ ಫಸ್ಟ್ ಲುಕ್ ಒಳಗೊಳ್ಳಲಿದೆ.

ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್‌ ಆಫ್ ಪವರ್ ಎರಡನೇ ಸೀಸನ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರೈಮ್ ವೀಡಿಯೋದಲ್ಲಿ ಲಭ್ಯವಿರಲಿದೆ
ದಿ ಲಾರ್ಡ್‌ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಎರಡನೇ ಸೀಸನ್‌ನ ಟೀಸರ್ ಟ್ರೇಲರ್ ಮತ್ತು ಕೀ ಆರ್ಟ್ ಅಸೆಟ್‌ಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಹಾಗೂ ಹೆಚ್ಚುವರಿ ಸಿರೀಸ್ ಮಾಹಿತಿಗಾಗಿ, ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಪ್ರೆಸ್ ಸೈಟ್‌ಗೆ ಭೇಟಿ ನೀಡಿ.

Spread the love

Continue Reading
Click to comment

Leave a Reply

Your email address will not be published. Required fields are marked *